ಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಪರಾರಿ

ದಾವಣಗೆರೆ, ಜೂ.30-ಚನ್ನಗಿರಿ ಪಟ್ಟಣದಲ್ಲಿ ದೇವಸ್ಥಾನದ ಬಳಿ ಬೆಳೆದಿದ್ದ ಲಕ್ಷಾಂತರ ಬೆಲೆಯ ಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ವಿದ್ಯುತ್ ಇರಲಿಲ್ಲ. ಈ ವೇಳೆ ಕಳ್ಳರು ಕೋಟೆ ದೇವಸ್ಥಾನದ ಬಳಿ ಇದ್ದ ಬೃಹತ್ ಗಂಧದ ಮರವನ್ನು ಕತ್ತರಿಸಿ ರೆಂಬೆಗಳನ್ನು ಅಲ್ಲೇ ಬಿಟ್ಟು ಬುಡವನ್ನು ಹೊಯದಿದ್ದಾರೆ. ವಲಯ ಅರಣ್ಯಾಧಿಕಾರಿ ಮೈಲಾರಲಿಂಗಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಂಧದ ಮರದ ರೆಂಬೆಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಚನ್ನಗಿರಿ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ