ದೇವಾಲಯದಲ್ಲಿ ಬೆಲೆಬಾಳುವ ವಸ್ತುಗಳ ಕಳ್ಳತನ

ಕೆಜಿಎಫ್, ಜೂ.30-ಬೋರಿಲಾಲ್ ಪೇಟೆಯ ಸ್ಮಶಾನದಲ್ಲಿ ಹೊಸದಾಗಿ ನಿರ್ಮಿಸಿದ್ದ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಸುಮಾರು 24,000 ರೂ ಮೌಲ್ಯದ ವಸ್ತುಗಳನ್ನು ಅಪಹರಣ ಮಾಡಲಾಗಿದೆ. ದೇವಾಲಯವನ್ನು ಮುರುಗನ್ ಎಂಬುವರು ಸ್ವಂತ ಖರ್ಚಿನಿಂದ ಕಟ್ಟಿದ್ದರು. ದೇವಾಲಯದ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಹಿತ್ತಾಳೆ ದೀಪಗಳು, ಆರತಿ ತಟ್ಟೆಗಳು, ತ್ರಿಶೂಲ ಮತ್ತು ಸೌಂಡ್ ಸಿಸ್ಟಂ ಅಪಹರಣ ಮಾಡಿದ್ದಾರೆ ಎಂದು ಗಣೇಶನ್ ಎಂಬುವರು ರಾಬರ್ಟಸನ್‍ಪೇಟೆ ಪೆÇಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ