ಬೆಂಗಳೂರು, ಜೂ.30- ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಇಂದು ನಿವೃತ್ತಿ ಹೊಂದಿದರು.
ಏಪ್ರಿಲ್ ಅಂತ್ಯದಲ್ಲಿ ನಿವೃತ್ತಿ ಹೊಂದಿದ್ದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮೂರು ತಿಂಗಳ ಕಾಲ ಅವರ ಸೇವಾ ಅವಧಿಯನ್ನು ವಿಸ್ತರಣೆ ಮಾಡಿತ್ತು.
ಆ ಅವಧಿ ಇಂದಿಗೆ ಮುಕ್ತಾಯಗೊಂಡಿದ್ದು, ರತ್ನಪ್ರಭಾ ಅವರು ಇಂದು ನಿವೃತ್ತಿಯಾದರು. ಪುನಃ ಮೂರು ತಿಂಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲು ರಾಜ್ಯಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತಾದರೂ ಆನಂತರ ಪತ್ರವನ್ನು ಹಿಂಪಡೆದ ಹಿನ್ನೆಲೆಯಲ್ಲಿ ರತ್ನಪ್ರಭಾ ಅವರ ಸೇವಾ ಅವಧಿ ಇಂದಿಗೆ ಮುಕ್ತಾಯಗೊಂಡಿತು.