ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಶಾಸಕ ಭೆರತಿ ಬಸವರಾಜ್ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ, ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲು

 

ಬೆಂಗಳೂರು, ಜೂ.30-ನೋಟು ಅಮಾನೀಕರಣಗೊಂಡ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್, ಶಾಸಕ ಭೆರತಿ ಬಸವರಾಜ್ ಮುಂತಾದವರು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸುಮಾರು 410 ಕೋಟಿ ರೂ.ಗಳಷ್ಟು ಹಣವನ್ನು ಪರಿವರ್ತಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಈ ಸಂಬಂಧ ಸಿಬಿಐ, ಜಾರಿ ನಿರ್ದೇಶನಾಲಯ, ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ಸಂಬಂಧ ವಿವರ ನೀಡಿದ ಅವರು, ನವೆಂಬರ್ 8, 2016ರಂದು ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದಾಗ ಜಾರ್ಜ್, ಸಿದ್ದರಾಮಯ್ಯ, ಬೈರತಿಬಸವರಾಜ್ ಅವರು ಸುಮಾರು 410 ಕೋಟಿ ರೂ.ಗೂ ಹೆಚ್ಚು ಹಣವನ್ನು ಬೆಂಗಳೂರು ಒನ್ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಸಿಎಂಎಸ್ ಕಂಪ್ಯೂಟರ್ಸ್ ಲಿಮಿಟೆಡ್‍ನ ಸಂಸ್ಥೆಯ ಮುಖ್ಯಸ್ಥರೊಂದಿಗೆ ಶಾಮೀಲಾಗಿ ಅಕ್ರಮವಾಗಿ ನೋಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

9.11.2016 ರಿಂದ 31.3.2017ರ 141 ದಿನಗಳಲ್ಲಿ 410 ಕೋಟಿ ಮೊತ್ತದ ಹಣವನ್ನು ಪರಿವರ್ತಿಸಿಕೊಂಡಿರುವ ಬಗ್ಗೆ ಸುಮಾರು 235 ಪುಟಗಳ ದಾಖಲೆಯನ್ನು ಪತ್ರಿಕಾಗೋಷ್ಠಿಯಲ್ಲಿಂದು ಬಿಡುಗಡೆ ಮಾಡಿದರು.
ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಎಸ್‍ಎನ್‍ಎಲ್, ಬಿಡಿಎ, ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಕಂದಾಯ ಇಲಾಖೆ, ನಾಡಕಚೇರಿ, ಪಾಸ್‍ಪೆÇೀರ್ಟ್ ಆಫೀಸ್, ಪೆÇಲೀಸ್ ಇಲಾಖೆ, ಬೆಂಗಳೂರು ವಿವಿ ಸೇರಿದಂತೆ ರಾಜ್ಯಸರ್ಕಾರದ ವಿವಿಧ ಇಲಾಖೆಗಳ ಸುಮಾರು 96 ವಿವಿಧ ಸೇವೆಗಳು, ಹಣ ಪಾವತಿ ಹಾಗೂ 14ಕ್ಕೂ ಹೆಚ್ಚು ದೂರಸಂಪರ್ಕ ಕೇಂದ್ರಗಳ ಬಿಲ್ ಪಾವತಿ ಮೊದಲಾದವುಗಳು ಬೆಂಗಳೂರು ಒನ್ ಮುಖೇನ ನಡೆಯುತ್ತವೆ. ತ್ವರಿತ, ನಿಶ್ಚಿತ ಹೊಣೆಗಾರಿಕೆ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಿಂದ ರಾಜ್ಯಸರ್ಕಾರದ ಇಡಿಸಿಎಸ್ ನಿರ್ದೇಶನಾಲಯ, ಪಿಪಿಪಿ ಮಾದರಿಯಲ್ಲಿ ನಿರ್ವಹಿಸಲು ಸಿಎಂಎಸ್ ಕಂಪ್ಯೂಟರ್ಸ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 93 ಬೆಂಗಳೂರುಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಶೇ.80ರಷ್ಟು ಹಣ ನಗದು ರೂಪದಲ್ಲಿಯೇ ಸಂಗ್ರಹವಾಗುತ್ತದೆ. ನಗದು ರೂಪದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಹಣದ ಪೈಕಿ ರೂ.100, 50ರ ಮುಖಬೆಲೆಯದ್ದಾಗಿರುತ್ತದೆ. ಈ ಕೇಂದ್ರದಲ್ಲಿ ಮುಖಬೆಲೆಯ ನೋಟುಗಳನ್ನು ಕಮೀಷನ್ ಆಧಾರದಲ್ಲಿ ಸಂಸ್ಥೆಯ ಮುಖ್ಯಸ್ಥರು ಅಮಾನೀಕರಣಗೊಂಡ 500 ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

2016ರ ನವೆಂಬರ್ 9 ರಿಂದ 30ರವರೆಗಿನ 22 ದಿನಗಳಲ್ಲಿ 120.67 ಕೋಟಿ, ಡಿಸೆಂಬರ್‍ನಲ್ಲಿ 96.53 ಕೋಟಿ, 2017ರ ಜನವರಿಯಲ್ಲಿ 104.88 ಕೋಟಿ, ಫೆಬ್ರವರಿಯಲ್ಲಿ 109.59 ಕೋಟಿ, ಮಾರ್ಚ್‍ನಲ್ಲಿ 113.26 ಕೋಟಿ ರೂ.ಗಳು ಸೇರಿದಂತೆ 141 ದಿನಗಳ ಅವಧಿಯಲ್ಲಿ 544.96 ಕೋಟಿ ರೂ. ಸಂಗ್ರಹವಾಗಿದ್ದು ಇದರಲ್ಲಿ ಶೇ.80ರಷ್ಟು ಹಣ 100 ಮತ್ತು 50ರ ಮುಖಬೆಲೆಯದ್ದಾಗಿದೆ. ಈ ಅವಧಿಯಲ್ಲಿ ಕೇವಲ 1000, 500 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‍ಗೆ ಜಮಾ ಮಾಡಿ, ಕಡಿಮೆ ಮುಖಬೆಲೆಯ 410 ಕೋಟಿ ರೂ.ಗಳನ್ನು ಆಯಾ ಇಲಾಖೆಗಳ ಅಧಿಕೃತ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡದೆ ಕಮೀಷನ್ ಆಧಾರದಲ್ಲಿ ಈ ಮೂವರಿಗೆ ಬೆಂಗಳೂರು ಒನ್ ಕೇಂದ್ರದ ಮುಖ್ಯಸ್ಥರು ನೀಡಿದ್ದಾರೆ.
ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಬೈರತಿ ಬಸವರಾಜ್ ಮತ್ತಿತರರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೃಹತ್ ಆರ್ಥಿಕ ಅವ್ಯವಹಾರವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕೆಂದು ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಕೆ ನಡೆಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ