ಈ ವಾರ ತೆರೆಗೆ `ಕುಲ್ಫಿ`

 

ಎ ಎಂ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುನಿಸ್ವಾಮಿ ಎಸ್.ಡಿ ಅವರು ನಿರ್ಮಿಸಿರುವ `ಕುಲ್ಫೀ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಖ್ಯಾತ ವಿತರಕರಾದ ಬಹರ್ ಫಿಲಂಸ್ ಭಾಷಾ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

ಮಂಜು ಹಾಸನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನರಸಿಂಹಮೂರ್ತಿ ಅವರ ಛಾಯಾಗ್ರಹಣವಿದೆ. ಅಭೀಷೇಕ್ ಸಂಗೀತ ನಿರ್ದೇಶನ, ಮಾಸ್ ಮನೋಹರ್ ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಿನೋಲ್, ದಿಲೀಪ್, ಗಿರೀಶ್, ಲಾರೆನ್ಸ್, ರಮೇಶ್ ಭಟ್, ಬಿರಾದಾರ್ ಮುಂತಾದವರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ