ನಾಳೆ ಸಂಜೆ ಎ ವಾಕ್ ಇನ್ ದಿ ವುಡ್ಸ್ ನಾಟಕ

Varta Mitra News

 

ಬೆಂಗಳೂರು, ಜೂ.29-ಉದ್ಯಾನಗರಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಎ ವಾಕ್ ಇನ್ ದಿ ವುಡ್ಸ್ ಎಂಬ ಆಧುನಿಕ ಮತ್ತು ಸಮಕಾಲೀನ ನಾಟಕ ನಾಳೆ ಸಂಜೆ ಪ್ರದರ್ಶನವಾಗಲಿದೆ. ವಿಭಜನೆ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ತಲೆದೋರಿದ್ದ ಉದ್ವಿಗ್ನ ಪರಿಸ್ಥಿತಿ ಮತ್ತು ಒತ್ತಡದ ಸಂಗತಿಗಳ ಮೇಲೆ ಈ ನಾಟಕ ಬೆಳಕು ಚೆಲ್ಲಲಿದೆ. ಇದು ಉಭಯ ದೇಶಗಳ ನಡುವೆ ಭಾವೋದ್ವೇಗದ ಮತ್ತು ಭಾವನಾತ್ಮಕ ಸಂಬಂಧ ಚಿತ್ರಣ.
ನಗರದ ವೈಟ್‍ಫೀಲ್ಡ್ ಎಂಎಲ್‍ಆರ್ ಸಮಾವೇಶ ಸಭಾಂಗಣದಲ್ಲಿ ನಾಳೆ ಸಂಜೆ 6 ರಿಂದ 8 ಗಂಟೆವರೆಗೆ ನಾಟಕ ಪ್ರದರ್ಶನವಾಗಲಿದೆ. ರತ್ನ ಪಾಠಕ್ ಶಾ ಈ ನಾಟಕದ ನಿರ್ದೇಶಕರು.

ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ವೇಳೆ ಉಭಯ ದೇಶಗಳ ರಾಜತಾಂತ್ರಿಕರಾದ ಜಮಾಲುದ್ದೀನ್ ಲುಫ್ತುಲ್ಲಾ (ನಾಸೀರುದ್ದೀನ್ ಶಾ) ಹಾಗೂ ರಾಮ್ ಚಿನ್ನಪ್ಪ (ರಜತ್ ಕಪೂರ್) ಅವರು ಜಿನಿವಾದಲ್ಲಿ ಶಾಂತಿ ಸ್ಥಾಪನೆ ಪ್ರಸ್ತಾವನೆ ಬಗ್ಗೆ ಚರ್ಚಿಸುವ ಸಂಗತಿಗಳ ಅಂಶಗಳನ್ನೂ ಈ ನಾಟಕದಲ್ಲಿ ಬಿಂಬಿಸಲಾಗಿದೆ.
ಶೀತಲ ಸಮರದ ವೇಳೆ ಅಮೆರಿಕದ ಶಸ್ತ್ರಾಸ್ತ್ರ ಸಂಧಾನಕಾರ ಮತ್ತು ರಷ್ಯಾದ ಸಹವರ್ತಿ ನಡುವೆ ನಡೆದ ಸಂಧಾನ ಸಮಾಲೋಚನೆ ಸುತ್ತು ಸುತ್ತುವ 1988ರ ಲೀ ಬ್ಲೇಸಿಂಗ್ ನಾಟಕ ಆಧರಿಕ ಈ ಪ್ಲೇಗೆ ರಣದೀಪ್ ಹೂಡಾ ಮತ್ತು ಫೈಸಲ್ ರಶೀದ್ ಪೆÇ್ರಡಕ್ಷನ್ ನಿರ್ಮಾಣದ ಹೊಣೆ ಹೊತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ