ದೇಶದೆಲ್ಲೆಡೆ ಮೂತ್ರಪಿಂಡದ ವೈಫಲ್ಯ ಹೆಚ್ಚಲು ಡಯಾಲಿಸಿಸ್ ಚಿಕಿತ್ಸೆಯ ಕೊರತೆ ಹಾಗೂ ದುಬಾರಿ ಚಿಕಿತ್ಸೆ ಕಾರಣ: ನೆಫೆÇ್ರೀ ಸಹ-ಸಂಸ್ಥಾಪಕ ಕಮಲ್ ಶಾ

 

ಬೆಂಗಳೂರು,ಜೂ.28- ದೇಶದೆಲ್ಲೆಡೆ ಮೂತ್ರಪಿಂಡದ ವೈಫಲ್ಯ ಒಂದು ಅತ್ಯಂತ ಸಾಮಾನ್ಯ ದೀರ್ಘಕಾಲದ ಸಾಂಕ್ರಾಮಿಕ ಹರಡುವಿಕೆ ಮತ್ತು ಜನರಿಗೆ ಗುಣಮಟ್ಟದ ಡಯಾಲಿಸಿಸ್ ಚಿಕಿತ್ಸೆಯ ಲಭ್ಯತೆಯ ಕೊರತೆ ಹಾಗೂ ದುಬಾರಿ ಚಿಕಿತ್ಸೆ ಇದಕ್ಕೊಂದು ಕಾರಣ ಎಂದು ನೆಫೆÇ್ರೀ ಸಹ-ಸಂಸ್ಥಾಪಕ ಕಮಲ್ ಶಾ ಹೇಳಿದ್ದಾರೆ.
ಭಾರತದ ಅತೀ ದೊಡ್ಡ ಡಯಾಲಿಸಿಸ್ ಒದಗಿಸುವ ನೆಫೆÇ್ರೀ ಡಯಾಲಿಸಿಸ್‍ನಿಂದಾಗುವ ಸಾವಿನ ಕುರಿತಾಗಿ ದೇಶದ 18 ರಾಜ್ಯಗಳ 85 ನಗರಗಳಲ್ಲಿ ನಡೆಸಿದ ಅಧ್ಯಯನದ ವೇಳೆ ಮಾತನಾಡಿದ ಅವರು, ಡಯಾಲಿಸಿಸ್ ರೋಗಿಗಳಲ್ಲಿ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಲು ಸರಿಯಾದ ಸಮಯದಲ್ಲಿ ರೋಗದ ತೀವ್ರತೆಯನ್ನು ಪತ್ತೆಹಚ್ಚುವಲ್ಲಿ ಇರುವ ಜಾಗೃತಿಯ ಕೊರತೆಯೇ ಕಾರಣ ಎಂದು ಹೇಳಿದರು.

ದೇಶದಾದ್ಯಂತ 16,000 ರೋಗಿಗಳನ್ನುಆಧಾರವಾಗಿಟ್ಟುಕೊಂಡು ನಡಸಲಾದ ಈ ಅಧ್ಯಯನ ವರದಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ರೋಗಿಗಳು 1-ವರ್ಷದೊಳಗಿನ ಸಾವು 22% ಇದ್ದರೆ, ನಗರಪ್ರದೇಶದವರ ಪ್ರಮಾಣ 11%, ಇದು ಜಾಗೃತಿ, ಶಿಕ್ಷಣದ ಕೊರತೆ ಎಂದು ಹೇಳಲಾಗುತ್ತದೆ.
ಭೌಗೋಳಿಕ ಸ್ಥಾನಮಾನಕ್ಕೆ ತಕ್ಕಂತೆ, ಸಮೀಕ್ಷೆಯ ವರದಿ ಹೇಳುವಂತೆ, ಉತ್ತರ, ದಕ್ಷಿಣ ಮತ್ತು ಪಶ್ಷಿಮ ಭಾಗಗಳಿಗೆ ಹೋಲಿಸಿದರೆ ಪೂರ್ವ ಭಾರತದಲ್ಲಿ ಡಯಾಲಿಸಿಸ್‍ಗೆ ಒಳಗಾಗುತ್ತಿರುವವರು 5 ವರ್ಷಗಳ ಚಿಕಿತ್ಸೆಯ ನಂತರ ಬದುಕುವ ಸಾಧ್ಯತೆ 64% ಕಡಿಮೆ.ಇದಕ್ಕೆ ಪ್ರಮುಖ ಕಾರಣ ಸೂಕ್ತ ಚಿಕಿತ್ಸೆಯಲಭ್ಯತೆ ಇಲ್ಲದಿರುವುದು ಎಂದರು.
ಡಯಾಲಿಸಿಸ್ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ ಮತ್ತು ಎಲ್ಲರಕೈಗೆಟುಕುವಂತೆ ಮಾಡಲು ನೆಫೆÇ್ರೀ ಬಡತನರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ಯೋಜನೆಗಳ ಮೂಲಕ ಉಚಿತ ಡಯಾಲಿಸಿಸ್‍ನ ಪ್ರಯೋಜನ ಪಡೆದು ಕೊಳ್ಳಲು ನೆರವಾಗಿದೆ. ನೆಫೆÇ್ರೀ ತನ್ನ ಇರುವಿಕೆ ಮತ್ತು ಚಿಕಿತ್ಸೆಯನ್ನು ದೇಶದೆಲ್ಲೆಡೆ ವಿಸ್ತರಿಸಿದ ನಂತರ ಯಶಸ್ವಿಯಾಗಿ 2 ಮಿಲಿಯನ್ ಡಯಾಲಿಸಿಸ್ ಅವಧಿಗಳನ್ನು ಪೂರ್ಣಗೊಳಿಸಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ