
ಬೆಂಗಳೂರು, ಜೂ.28-ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬ ಮುಖ್ಯ ಅಭಿಯಂತರರನ್ನು ನಿಯೋಜಿಸಲಾಗುವುದು ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದರು.
ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಪತ್ರಿಕೆ ನೋಡಿದರೂ ಗುಂಡಿಗಳ ಬಗ್ಗೆ ವರದಿ ಬಂದಿರುತ್ತದೆ. ಇದರ ಜತೆಗೆ ಕಸದ ಬಗ್ಗೆ ಆರೋಪಗಳು ಕೇಳಿಬರುತ್ತಲೇ ಇವೆ. ಇದನ್ನೆಲ್ಲ ನೋಡಿ ನಮಗೆ ಅಸಹ್ಯ ಎನಿಸುತ್ತಿದೆ. ಹಾಗಾಗಿ ಗುಂಡಿ ಮುಚ್ಚುವ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬ ಮುಖ್ಯ ಅಭಿಯಂತರರನ್ನು ನಿಯೋಜಿಸಲೇಬೇಕು ಎಂದು ಆಯುಕ್ತರಿಗೆ ಸೂಚಿಸಿದರು.
ಕಳೆದ ಬಾರಿ ರಸ್ತೆ ಗುಂಡಿಗೆ ಬಿದ್ದು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಎಲ್ಲೆಲ್ಲೋ ಗುಂಡಿ ಮುಚ್ಚಿರುವುದಾಗಿ ಹೇಳುತ್ತಲೇ ಇದ್ದಾರೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮತ್ತೆ ಇಂತಹ ಅವಘಡಗಳು ಸಂಭವಿಸಬಾರದು. ಹಾಗಾಗಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನೋಡಿಕೊಳ್ಳಲು ಒಬ್ಬ ಮುಖ್ಯ ಅಭಿಯಂತರರನ್ನು ನಿಯೋಜಿಸುವುದೇ ಒಳ್ಳೆಯದೇ ಎಂದು ಸಂಪತ್‍ರಾಜ್ ಸೂಚಿಸಿದರು.