
ಬೆಂಗಳೂರು, ಜೂ.28- ನಗರದ ಪಾತಕಲೋಕದಲ್ಲಿ ಹೆಜ್ಜೆಗುರುತು ಮೂಡಿಸಿ ಇದೀಗ ಪೆÇಲೀಸರ ಬಲೆಗೆ ಬಿದ್ದಿರುವ ರೌಡಿ ಸೈಕಲ್ ರವಿ ಮನೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಈತನ ಮನೆಯನ್ನು ಪತ್ತೆ ಹಚ್ಚಿದ ಪೆÇಲೀಸರು ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು.
ನಿನ್ನೆ ಮಧ್ಯಾಹ್ನ ಘಟನೆ ನಡೆದ ಸಂದರ್ಭದಲ್ಲಿ ಸಿಸಿಬಿ ಪೆÇಲೀಸರು ರೌಡಿ ಸೈಕಲ್ ರವಿಯ ಕಾರು ಹಾಗೂ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.
ವಿಕ್ಟೋರಿಯಾದಲ್ಲಿ ಚಿಕಿತ್ಸೆ:
ಸಿಸಿಬಿ ಪೆÇಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಸೈಕಲ್ ರವಿಗೆ ಕೆಂಗೇರಿಯ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
24 ಪ್ರಕರಣ:
ತಮಿಳುನಾಡಿನ ನೆಲೆ ಮಾಡಿಕೊಂಡಿದ್ದ ರೌಡಿ ಸೈಕಲ್ ರವಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದ್ದನು. ಈತನ ವಿರುದ್ಧ 6 ಕೊಲೆ ಪ್ರಕರಣ ಸೇರಿದಂತೆ 24 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ.
ಎರಡು ದಶಕಗಳಿಂದ ರಾಜಧಾನಿಯ ಪಾತಕಲೋಕದಲ್ಲಿ ಗುರುತಿಸಿಕೊಂಡ್ದಿ ಈತ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಪೆÇಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು.
ಸಹಚರರಿಗಾಗಿ ಶೋಧ:
ಸೈಕಲ್ ರವಿ ಸಹಚರರಿಗಾಗಿ ಸಿಸಿಬಿ ಪೆÇಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಸೈಕಲ್ ರವಿ ಮತ್ತು ಸಹಚರರು ರಿಯಲ್ ಎಸ್ಟೇಟ್ ಹಾಗೂ ಮತ್ತಿತರ ವ್ಯವಹಾರದಲ್ಲಿ ಬಾಗಿಯಾಗಿದ್ದು, ಇದೀಗ ಸಹಚರರ ಪತ್ತೆಕಾರ್ಯ ಮುಂದುವರೆದಿದೆ.
ಗುಂಡುಹಾರಿಸಿ ವಶಕ್ಕೆ:
ಪೆÇಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ರೌಡಿ ಸೈಕಲ್ ರವಿ ನಿನ್ನೆ ಮಧ್ಯಾಹ್ನ ಕೆಂಗೇರಿ ಸಮೀಪದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಫಾಚ್ರ್ಯೂನರ್ ಕಾರಿನಲ್ಲಿ ಹೋಗುತ್ತಿದ್ದ ಬಗ್ಗೆ ಸಿಸಿಬಿ ಪೆÇಲೀಸರಿಗೆ ಮಾಹಿತಿ ಲಭಿಸಿತ್ತು.
ತಕ್ಷಣ ಸಿಸಿಬಿ ಇನ್ಸ್‍ಪೆಕ್ಟರ್‍ಗಳಾದ ಪ್ರಕಾಶ್, ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ರವಿಯನ್ನು ಬಂಧಿಸಲು ಕಾರ್ಯಾಚರಣೆಗಿಳಿಯಿತು.
ಆಗ ಪೆÇಲೀಸರನ್ನು ಕಂಡ ತಕ್ಷಣ ಸೈಕಲ್ ರವಿ ಅತಿವೇಗವಾಗಿ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿ ಸಿಸಿಬಿ ಪೆÇಲೀಸರ ಜೀಪಿನತ್ತ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ. ಈ ಸಂದರ್ಭದಲ್ಲಿ ಪೆÇಲೀಸ್ ಕಾನ್‍ಸ್ಟೆಬಲ್ ಒಬ್ಬರು ಗಾಯಗೊಂಡಿದ್ದಾರೆ.
ತಕ್ಷಣ ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್‍ಗಳು ಗುಂಡು ಹಾರಿಸಿದಾಗ ಒಂದು ಗುಂಡು ಆತನ ಕಾಲಿಗೆ ಹಾಗೂ ಮತ್ತೊಂದು ಗುಂಡು ಹೊಟ್ಟೆ ಭಾಗಕ್ಕೆ ಬಿದ್ದಾಗ ಕುಸಿದು ಬಿದ್ದಿದ್ದಾನೆ.
ಈ ವೇಳೆ ಪೆÇಲೀಸರು ಈತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.