ವಾಣಿಜ್ಯ ನಗರಿಯಲ್ಲಿ ಸಚಿವ ಜಿ.ಟಿ.ಡಿ. ಶಾಪಿಂಗ್

ಹುಬ್ಬಳ್ಳಿ:- ಉನ್ನತ ಶಿಕ್ಷಣ ಸಚಿವ ಜಿ ಡಿ ದೇವೇಗೌಡ ವಾಣಿಜ್ಯ ನಗರಿ ಹುಬ್ಬಳ್ಳಿಯ ಜವಳಿ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡೋ ಮೂಲಕ ಜನರ ಅಚ್ಚರಿಗೆ ಕಾರಣರಾಗಿದ್ದಾರೆ. ಹೌದು ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಸಚಿವರು , ನೇರವಾಗಿ ಜವಳಿ ಮಾರ್ಕೆಟ್ಗೆ ಹೋಗಿದ್ದಾರೆ. ಜವಳಿ ಸಾಲಿನಲ್ಲಿ ಒಂದು ಬಟ್ಟೆ ಅಂಗಡಿಗೆ ತೆರಳಿ ಗರಿಗರಿ ಪಂಜೆಗಳನ್ನು ಖರೀದಿ ಮಾಡಿದ್ದಾರೆ. ನಾಳೆ ಬೆಳಗಾವಿ ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲು ಹುಬ್ಬಳ್ಳಿಗೆ ಆಗಮಿಸಿದ್ರು . ಸಚಿವರು ಹಾಗೆ ಏಕಾಏಕಿ ಮಾರ್ಕೆಟ್ ಹೋಗೆ ಪಂಚೆ ಖರೀದಿ ಮಾಡಿದ್ದಾರೆ, ಇನ್ನು ಜನರು ನೂತನ ಸಚಿವರನ್ನು ಮಾರ್ಕೆಟ್ ನಲ್ಲಿ ಕಂಡು ಖುಷಿ ಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ