ಬೆಂಗಳೂರು,ಜೂ.28-ಹಿಂದೆ ಹೆಣ್ಣು ಅಂದರೆ ಹುಣ್ಣು ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ. ಆಕೆ ಅಬಲೆಯಲ್ಲ ಸಬಲೆ. ಹೆಣ್ಣು ಸಮಾಜದ ಕಣ್ಣು ಎಂದು ವಿರಕ್ತ ಮಠದ ಶ್ರೀ ಡಾ.ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ದಿವ್ಯ ಜ್ಯೋತಿ ಸೇವಾ ಟ್ರಸ್ಟ್‍ನ ಮೂರನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಲು ಮರದ ತಿಮ್ಮಕ್ಕ ಈ ಇಳಿ ವಯಸ್ಸಿನಲ್ಲೂ ಗಿಡಮರಗಳನ್ನು ಪ್ರಕೃತಿ ಪ್ರೇಮ ಮೆರೆಯುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ದಿವ್ಯಜ್ಯೋತಿ ಪ್ರಶಸ್ತಿಯನ್ನು ನಾಡೋಜ ಸಾಲುಮರದ ತಿಮ್ಮಕ್ಕ ಮತ್ತು ವಿಧಾನ ಪರಿಷತ್ ಸದಸ್ಯೆ, ನಟಿ ತಾರಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾವಿದರಾದ ಭವ್ಯ, ಡಿಂಗ್ರಿನಾಗರಾಜ್, ರಮೇಶ್‍ಭಟ್, ಹೊನ್ನವಳ್ಳಿಕೃಷ್ಣ, ಬಿಬಿಎಂಪಿ ಸದಸ್ಯರು ಉಪಸ್ತಿತರಿದ್ದರು.
ಸದರಿ ಟ್ರಸ್ಟ್ ವತಿಯಿಂದ ಗೋಶಾಲೆ, ಉಚಿತ ಆಂಬುಲೆನ್ಸ್, ವಿಕಲಚೇತನ ವಿದ್ಯಾರ್ಥಿಗಳಿಗೆ ಐಎಎಸ್ ವ್ಯಾಸಾಂಗ ಮಾಡಲು ಧನ ಸಹಾಯ, 24 ಘಂಟೆಗಳ ಕಾಲ ಮಹಿಳಾ ಸೇವೆ ಒದಗಿಸಲು ಈ ಸಾಲಿನಲ್ಲಿ ಯೋಜನೆ ಹಾಕಿಕೊಂಡಿದೆ ಎಂದು ಟ್ರಸ್ಟ್‍ನ ಡಾ.ವೀಣಾ ಅಶೋಕ್ ಮತ್ತು ಡಾ.ಜ್ಯೋತಿ.ಜೆ.ಯು ತಿಳಿಸಿದರು.