ಕಾಸ್ಟಿಂಗ್ ಕೌಚ್ ದೌರ್ಜನ್ಯವಲ್ಲ, ಒಪ್ಪಂದ; ಅದು ಚಿತ್ರರಂಗಕ್ಕೆ ಸೀಮಿತವಾಗಿಲ್ಲ: ಪವಿತ್ರಾ ಲೋಕೇಶ್

ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಭಾರಿ ಸದ್ದು ಮಾಡುತ್ತಿದ್ದು, ಕಾಸ್ಟಿಂಗ್ ಕೌಚ್ ದೌರ್ಜನ್ಯವಲ್ಲ. ಅದೊಂದು ಒಪ್ಪಂದ ಎಂದು ಖ್ಯಾತ ಪೋಷಕ ನಟಿ ಪವಿತ್ರಾ ಲೋಕೇಶ್ ಅವರು ಹೇಳಿದ್ದಾರೆ.
ಇತ್ತೀಚಿಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪವಿತ್ರಾ ಲೋಕೇಶ್ ಅವರು, ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಒಪ್ಪಿಕೊಂಡಿದ್ದಾರೆ.
ಕಾಸ್ಟಿಂಗ್ ಕೌಚ್ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಲೈಂಗಿಕ ದೌರ್ಜನ್ಯ ಅನುಭವಿಸಿದ ಸಾಕಷ್ಟು ನಟಿಯರಿದ್ದಾರೆ.  ಕಾಸ್ಟಿಂಗ್ ಕೌಚ್ ಚಿತ್ರರಂಗಲ್ಲಿರುವ ಬಹುದೊಡ್ಡ ಸಮಸ್ಯೆ. ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಫ್ಟ್ ವೇರ್​ ಕಂಪನಿಗಳು​​ ಸೇರಿದಂತೆ ವಿವಿಧೆಡೆ ನುಸುಳಿದೆ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲೂ ಪುರುಷರು ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳುವುದು ಮತ್ತು ಮಹಿಳೆಯರು,  ಪುರುಷರನ್ನು ದುರುಪಯೋಗ ಪಡಿಸಿಕೊಳ್ಳುವುದು ಸಾಮಾನ್ಯ. ಆದರೆ ಮಹಿಳೆಯರು ಇಂತಹದ್ದನ್ನು ವಿರೋಧಿಸಬೇಕು ಎಂದಿದ್ದಾರೆ.
ಕಾಸ್ಟಿಂಗ್ ಕೌಚ್ ಗೆ ನೀವು ಒಪ್ಪುವುದಿಲ್ಲ ಎಂದು ಹೇಳಿದರೆ ನಿಮ್ಮ ಆದ್ಯತೆ ಏನು ಎಂಬುದು ಆ ವ್ಯಕ್ತಿಗೆ ಅರ್ಥವಾಗುತ್ತದೆ. ಒಂದು ವೇಳೆ ಒಪ್ಪಿಕೊಂಡರೆ ನೀವು ಸಹ ಅದರ ಲಾಭ ಪಡೆಯುತ್ತಿದ್ದೀರಿ ಎಂದಾಗುತ್ತದೆ. ಇಲ್ಲಿ ಪರಸ್ಪರ ಒಪ್ಪಿಗೆ ಮೇಲೆ ಕಾಸ್ಟಿಂಗ್ ಕೌಚ್ ನಡೆಯುತ್ತದೆ. ಹೀಗಾಗಿ ಅದು ದೌಜರ್ನ್ಯ ಅಲ್ಲ. ಒಂದು ಒಪ್ಪಂದ ಎಂದು ಪವಿತ್ರಾ ಲೋಕೇಶ್ ಅವರು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ