ಬೆಂಗಳೂರು,ಜೂ.27- ಸಗಟು ಕೇಂದ್ರಕ್ಕೆ ಖುದ್ದು ನ್ಯಾಯಬೆಲೆ ಅಂಗಡಿ ಮಾಲೀಕರೇ ಹೋಗಿ ಎತ್ತುವಳಿ ಮಾಡುವುದು ಕೆಲ ಸಂದರ್ಭದಲ್ಲಿ ಕಷ್ಟವಾಗುವ ಕಾರಣ ಮಾಲೀಕರ ರಕ್ತಸಂಬಂಧಿಯೊಬ್ಬರಿಗೆ ಅವಕಾಶ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘ ಮನವಿ ಮಾಡಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಾನಂದಪ್ಪ, ಪಡಿತರ ಚೀಟಿದಾರರು ಸಹ ನ್ಯಾಯಬೆಲೆ ಅಂಗಡಿಗಳಿಗೆ ತಮ್ಮ ಬಯೋಮೆಟ್ರಿಕ್ ನೀಡಿ ಪಡಿತರ ಪqಯುವ ಪದ್ಧತಿ ಜಾರಿಗೆ ಬಂದು ಒಂ ವರ್ಷವಾಗಿದೆ. ಇದು ಕೂಡ ಒಳ್ಳೆಯ ನಿರ್ಧಾರ. ಆದರೆ ಪಡಿತರ ಚೀಟಿದಾರರಲ್ಲಿ ಹಲವರು ವಯಸ್ಸಾದವರು ಇರುತ್ತಾರೆ. ಈಗ ಹಾಲಿ ಶೇ.2ರಷ್ಟು ಶೇಕಡಾ ರಿಯ್ತಿ ನೀಡಲಾಗುತ್ತಿದೆ. ಇದನ್ನು ಶೇ.10ಕ್ಕೆ ಏರಿಸಬೇಕೆಂದು ಒತ್ತಾಯಿಸಿದರು.
ಎಲ್ಲ ಪಡಿತರ ಕಾರ್ಡುದಾರರಿಗೆ ಪ್ರತಿ ತಿಂಗಳು ಒಂದು ಲೀಟರ್ ಸೀಮೆಎಣ್ಣೆ ವಿತರಿಸಬೇಕು. ನಮಗೆ ನೀಡುತ್ತಿರುವ ಕಮೀಷನ್ ದರ ಈಗ 87 ರೂ. ಪ್ರತಿ ಕ್ವಿಂಟಾಲ್‍ಗೆ ನೀಡುತ್ತಿದ್ದು, ಈ ಹಿಂದಿನ ಸರ್ಕಾರವು 100 ರೂ. ನೀಡುವುದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಿತ್ತು. ಆದರೆ ಈವರೆಗೂ ಜಾರಿಯಾಗಿಲ್ಲ ಎಂದು ಬೇಸರಪಟ್ಟರು.
ಪ್ರತಿ ಕ್ವಿಂಟಾಲ್‍ಗೆ ಮಹಾರಾಷ್ಟ್ರದ ಮಾದರಿಯಂತೆ 150 ರೂ.ಗಳಿಗೆ ಹೆಚ್ಚಿಸಬೇಕು. ಕಳಪೆ ತೊಗರಿಬೇಳೆ ವಿತರಿಸುವ ಬದಲು ಜನರಿಗೆ ಹಿಂದಿನಂತೆ ಸಕ್ಕರೆ, ತಾಳೆ ಎಣ್ಣೆ, ಉಪ್ಪು, ಹೆಸರುಕಾಳು ಇವುಗಳನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ರಾಜು, ಗೌರವ ಅಧ್ಯಕ್ಷ ಡಿ.ಎನ್.ಹಾಲಸ್ವಾಮಿ, ಕಾರ್ಯಾಧ್ಯಕ್ಷ ವೆಂಕಟೇಶ್ ಮತ್ತಿತರರು ಇದ್ದರು.