
ಹುಬ್ಬಳ್ಳಿ- ಪಡಿತರ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಒಶಕ್ಕೆ ಪಡೆದ ಘಟನೆ ಹುಬ್ಬಳ್ಳಿ ತಾಲೂಕು ಕಿರೇಸೂರು ಗ್ರಾಮದಲ್ಲಿ ನಡೆದಿದೆ. ನ್ಯಾಯಬೆಲೆ ಅಂಗಡಿಯಿಂದ ಪಡೆದ ಪಡಿತರ ಅಕ್ಕಿಯನ್ನ ಜನರಿಗೆ ಆಮಿಶವೊಡ್ಡಿ ಹೆಚ್ಚಿನ ದರಕ್ಕೆ ಖರೀದಿಸಿ, ಸಾಗಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಅಶೋಕ ಹಾಗೂ ಶಾಹಿದ ಸವಣೂರ ಎಂಬುವರು ಒಟ್ಟು ಆರು ಕಿಂಟ್ವಾಲ್ ನಷ್ಟು ಅಕ್ಕಿಯನ್ನು ಆಟೋದಲ್ಲಿ ಸಾಗಾಟ ಮಾಡುತ್ತಿದ್ದರು. ಈ ವೇಳೆ ಗ್ರಾಮದ ಯುವಕರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಅಶೋಕ, ಶಾಹಿದ ಸವಣೂರ ಸೇರಿದಂತೆ ಸಾಗಾಟ ಮಾಡುತ್ತಿದ್ದ ಅಟೋ ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.