
ಹಾಸನ, ಜೂ.27- ಸಮಯಕ್ಕೂ ಮೊದಲೇ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿದ್ದ ಹಿನ್ನೆ¯ಯಲ್ಲಿ ತಾಲ್ಲೂಕಿನ ಕೊರವಂಗಲ ಗ್ರಾಪಂ ಪಿಡಿಒ ಆರ್.ರಂಗಸ್ವಾಮಿ ಅವರನ್ನು ಜಿಪಂ ಸಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ನಿನ್ನೆ ಸಂಜೆ ಸಿಇಒ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದಾಗ ಬಾಗಿಲು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಸಿಇಒ ಕೂಡಲೇ ಪಿಡಿಒ ಅವರನ್ನು ಕರೆದು ಕಾರಣ ಕೇಳಿದ್ದಾರೆ. ಕರ್ತವ್ಯ ಲೋಪ ಕಂಡು ಬಂದ ಹಿನ್ನೆ¯ಯಲ್ಲಿ ಪಿಡಿಒ ಅಮಾನತಿಗೆ ಆದೇಶ ಹೊರಡಿಸಿದ್ದು , ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ.