ವಾಷಿಂಗ್ಟನ್, ಜೂ.27-ಅಮೆರಿಕ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಿರುವ ಭಾರತದ ಮೇಲೆ ಸೇಡಿನ ತೆರಿಗೆ ಹೇರುವ ತಮ್ಮ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಐರೋಪ್ಯ ಸಮುದಾಯ, ಚೀನಾ ಮತ್ತು ಭಾರತದ ಜೊತೆ ಭಾರೀ ಪ್ರಮಾಣದ ವ್ಯಾಪಾರ ಅಸಮತೋಲನವನ್ನು ನಿಭಾಯಿಸಲು ಈ ದೇಶಗಳ ಸರಕುಗಳ ಮೇಲೆ ತಾನೂ ಕೂಡ ಸುಂಕ ವಿಧಿಸುವುದು ಅನಿವಾರ್ಯ ಎಂದು ಟ್ರಂಪ್ ಹೇಳುವ ಮೂಲಕ ಮತ್ತೊಂದು ಸುತ್ತಿನ ವಾಣಿಜ್ಯ ಸಮರಕ್ಕೆ ಸಜ್ಜಾಗಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅಮೆರಿಕದ ತಮ್ಮ ಸಹವರ್ತಿಗಳಾದ ಮೈಕ್ ಪೆÇಂಪಿಯೊ ಮತ್ತು ಜೇಮ್ಸ್ ಮ್ಯಾಟಿಸ್ ಅವರೊಂದಿಗೆ ಮುಂದಿನ ವಾರ ಪ್ರಥಮ 2+2 ಮಾತುಕತೆಗೆ ವೇದಿಕೆ ಸಜ್ಜಾಗಿರುವಾಗಲೇ ಈ ಬೆಳವಣಿಗೆ ಕಂಡುಬಂದಿದೆ.