ಬಿಬಿಎಂಪಿಯ 31 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಎತ್ತಂಗಡಿ

 

ಬೆಂಗಳೂರು, ಜೂ.27- ಲೋಕೋಪಯೋಗಿ ಮತ್ತಿತರ ಇಲಾಖೆಗಳಿಂದ ಎರವಲು ಸೇವೆ ಮೇಲೆ ಬಿಬಿಎಂಪಿಯಲ್ಲಿ ನಿಯೋಜನೆಗೊಂಡು ಅವಧಿ ಪೂರ್ಣಗೊಂಡರೂ ಮಾತೃ ಇಲಾಖೆಗೆ ಹಿಂದಿರುಗದೆ ಪಾಲಿPಯಲ್ಲೇ ಜಾಂಡಾ ಊರಿದ್ದ 31 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಎತ್ತಂಗಡಿ ಮಾಡಲಾಗಿದೆ.

ಕೆಎಸ್‍ಎಸ್‍ಐಡಿಸಿ ಮತ್ತು ಪಿಡಬ್ಲ್ಯೂಡಿ ಇಲಾಖೆಯಿಂದ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ಘಟಕ, ಬೃಹತ್ ನೀರುಗಾಲುವೆ, ರಸ್ತೆ ಮೂಲಭೂತ ಸೌಕರ್ಯ ಮತ್ತಿತರ ವಿಭಾಗಗಳಲ್ಲಿ ಎರವಲು ಸೇವೆ ಮೇಲೆ ಬಂದ ಎಇಇಗಳು ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಕಾಯ್ದೆಯಂತೆ ಯಾವುದೇ ಒಬ್ಬ ಅಧಿಕಾರಿ ಎರವಲು ಸೇವೆ ಮೇಲೆ ನಿಯೋಜನೆಗೊಂಡರೆ ಅಂತಹ ವ್ಯಕ್ತಿ ಮೂರು ಇಲ್ಲವೆ ಐದು ವರ್ಷಗಳ ಅವಧಿಯನ್ನು ಪೂರೈಸಿ ಮತ್ತೆ ಮಾತೃ ಇಲಾಖೆಗೆ ವಾಪಸಾಗಬೇಕು.

ಒಂದು ವೇಳೆ ಮತ್ತೆ ಪಾಲಿPಯ ಕರ್ತವ್ಯಕ್ಕೆ ಹಾಜರಾಗಬೇಕಾದರೆ ಸರ್ಕಾರದ ಅನುಮತಿ ಪಡೆದು ವಾಪಸಾಗಬೇಕಾಗುತ್ತದೆ. ಆದರೆ, ಪಾಲಿPಯಲ್ಲಿ ನೂರಾರು ಅಧಿಕಾರಿಗಳು ಎರವಲು ಸೇವೆ ಪೂರ್ಣಗೊಂಡರೂ ಜಾಗ ಖಾಲಿ ಮಾಡದೆ ಜಾಂಡಾ ಊರಿದ್ದಾರೆ.
ಅವಧಿ ಪೂರ್ಣಗೊಂಡರೂ ಪಾಲಿಕೆ ಬಿಡದ 31 ಎಇಇಗಳನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡವರು: ಜಿ.ಎಸ್.ಗಿರಿಶೆಟ್ಟಿ, ಶ್ರೀರಂಗರಾಜಪುರ, ಎಸ್.ಎನ್.ದಯಾನಂದ, ಬಿ.ಎಸ್.ಕೃಷ್ಣಕುಮಾರ್, ವಿನಯ್‍ಕುಮಾರ್, ಎ.ರವಿ, ಎಸ್.ಸಿ.ನರಸಿಂಹಮೂರ್ತಿ, ಎಸ್.ಬಿ.ರಾಹುಲ್, ಆರ್.ಬಾಬು, ರಾಜು ಎಸ್.ಪಿ., ಸಾವಿತ್ರಿ ಹಕ್ಕಿ, ಚನ್ನವೀರಯ್ಯ, ಆರ್.ಎಸ್.ಪರಮೇಶ್, ಎಂ.ನರೇಂದ್ರ, ಜಯಲಿಂಗಪ್ಪ, ಧರ್ಮಪ್ರಸಾದ್ ಗೌತಮ್ ಗಾಂವ್ಕರ್, ಡಿ.ಎಸ್.ಮೋಹನ್, ಅಶೋಕ್‍ಕುಮಾರ್, ದೇವರಾಜೇಗೌಡ, ಮೋಹನ್ ಪಿ.ಎಸ್., ಶಿವಪ್ರಸಾದ್ ಎಚ್.ಎಂ., ನಿತಿನ್ ಆರ್., ಎಸ್.ಡಿ.ತಿಮ್ಮೇಗೌಡ, ಅಶೋಕ್‍ಕುಮಾರ್ ವೆಂಕಟಕೊಂಡ ನಾಗಪ್ಪ, ಜೆ.ಎನ್.ಲೋಕೇಶ್, ಎ.ಸಿ.ರಾಜ, ಕೃಷ್ಣಪ್ಪ ಟಿ., ಲಕ್ಷ್ಮಿನಾರಾಯಣ ಆರ್. ಮತ್ತು ಎಚ್.ಆರ್.ಚನ್ನಕೇಶವ ವರ್ಗಾವಣೆಗೊಂಡ ಎಇಇಗಳು.

ಭ್ರಷ್ಟಾಚಾರಕ್ಕೆ ಮಾರ್ಗ: ಬಿಬಿಎಂಪಿಯಲ್ಲಿ ನqಯುತ್ತಿರುವ ಭ್ರಷ್ಟಾಚಾರಕ್ಕೆಲ್ಲ ಎರವಲು ಸೇವೆ ಮೇಲೆ ಬಂದ ಅಧಿಕಾರಿಗಳೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ತಮ್ಮ ನಿಯೋಜನಾ ಅವಧಿಯಲ್ಲಿ ಎರವಲು ಸೇವೆ ಅಧಿಕಾರಿಗಳು ಯಾವುದೇ ನಿಯಮ ಬಾಹಿರ ಕ್ರಮ ಕೈಗೊಂಡರೂ ಅಂತಹ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ಶಿಸ್ತುಕ್ರಮ ಜರುಗಿಸಲು ಅವಕಾಶವಿಲ್ಲ. ಹೀಗಾಗಿ ಎರವಲು ಅಧಿಕಾರಿಗಳು ತಮ್ಮ ಅವಧಿಯಲ್ಲಿ ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ.

ಮಾತ್ರವಲ್ಲ, ಬಿಬಿಎಂಪಿಯ ಮೂಲ ನೌಕರರಿಗಿಂತ ದುಪ್ಪಟ್ಟು ವೇತನ ಪqಯುವ ಎರವಲು ಅಧಿಕಾರಿಗಳು ಯಾವುದೇ ಮೇಲಧಿಕಾರಿಗಳ ಮಾತಿಗೆ ಮನ್ನಣೆ ನೀಡುವುದಿಲ್ಲ.
ಹೀಗಾಗಿ ತಮ್ಮ ಗಾಡ್‍ಫಾದರ್‍ಗಳ ಮೂಲಕ ಬಿಬಿಎಂಪಿಗೆ ಎರವಲು ಸೇವೆ ಮೇಲೆ ನಿಯೋಜನೆಗೊಳ್ಳುವ ಅಧಿಕಾರಿಗಳು ತಮ್ಮ ನಿಯೋಜನಾ ಅವಧಿ ಮುಗಿದರೂ ಮಾತೃ ಇಲಾಖೆಗೆ ಹಿಂದಿರುಗುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇದೀಗ 31 ಎಇಇಗಳನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿದೆ.
ಅದೇ ರೀತಿ ಇತರ ವಿಭಾಗಗಳಲ್ಲೂ ಬೀಡು ಬಿಟ್ಟಿರುವ ಎರವಲು ಸೇವೆ ಅಧಿಕಾರಿಗಳನ್ನು ಹಂತ ಹಂತವಾಗಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಸರ್ಕಾರ ತೀರ್ಮಾನಿಸಿದೆ.

5 ವರ್ಷ ವಾಪಸಾಗುವಂತಿಲ್ಲ: ನಿಯೋಜನಾ ಅವಧಿ ಪೂರ್ಣಗೊಂಡಿರುವ ಎರವಲು ಸೇವೆ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿದರೂ ಕೆಲ ಅಧಿಕಾರಿಗಳು ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ತಂದು ಮತ್ತೆ ಪಾಲಿಕೆಗೆ ವಾಪಸಾಗುವುದು ಮಾಮೂಲಾಗಿದೆ.

ಅಧಿಕಾರಿಗಳ ಈ ಮೊಂಡಾಟಕ್ಕೆ ಕಡಿವಾಣ ಹಾಕಲೇಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಸರ್ಕಾರ, ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿರುವ ಎರವಲು ಸೇವೆ ಅಧಿಕಾರಿಗಳಿಗೆ ಮತ್ತೆ ಐದು ವರ್ಷಗಳ ಕಾಲ ಬಿಬಿಎಂಪಿಗೆ ನಿಯೋಜನೆ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ