ತುಮಕೂರು, ಜೂ.26- ಅಪರಾಧ ಚಟುವಟಿಕೆಗಳಲ್ಲಿ ಪದೇ ಪದೇ ತೊಡಗಿಕೊಂಡರೆ ಅಂತಹವರನ್ನು ಗಡಿಪಾರು ಮಾಡಲಾಗುವುದು. ಇದಕ್ಕೂ ಮೀರಿದರೆ ನಿಮ್ಮ ಗ್ರಹಗತಿ ಸರಿ ಇರೋಲ್ಲ ಎಂದು ನಗರದ ಡಿವೈಎಸ್ಪಿ ನಾಗರಾಜ್ ಹಳೇ ಕಳ್ಳರಿಗೆ ಮತ್ತು ರೌಡಿ ಶೀಟರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿರುವ ರೌಡಿ ಶೀಟರ್ಗಳು ಹಳೆಯ ಕಳ್ಳರುಗಳ ಪರೇಡ್ ನಡೆಸಿ ಪ್ರತಿಯೊಬ್ಬರನ್ನು ಖುದ್ದು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ ನಂತರ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಯಾವುದೇ
ಪ್ರಕರಣಗಳಲ್ಲಿ ದಾಖಲಾಗದೆ ಉತ್ತಮ ಜೀವನ ಸಾಗಿಸುತ್ತಿರುವವರನ್ನು ಪ್ರಕರಣಗಳಿಂದ ಕೈ ಬಿಟ್ಟು ನಮ್ಮಿಂದ ಏನಾದರೂ ಸಹಕಾರ ಬೇಕಿದ್ದರೆ ಸಂಕೋಚ ಬಿಟ್ಟು ಕೇಳಿ ಎಂದು ಹೇಳಿದರು.
ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಂಇಪಿಎಸ್ , ಕ್ಯಾತಸಂದ್ರ , ಕೋರಾ, ಬೆಳ್ಳಾವಿ, ತಿಲಕ್ಪಾರ್ಕ್ , ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಬರುವ ಹಳೆಗಳ್ಳರ ಮತ್ತು ರೌಡಿ ಶೀಟರ್ಗಳ ಪರೇಡ್ ನಡೆಸಲಾಯಿತು.
ನೀವು ವಾಸವಿರುವ ಮನೆ ಮತ್ತು ಕೆಲಸದ ವಿವರವನ್ನು ಸಂಗ್ರಹಿಸಿದರು. ಎರಡಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಬಾಗಿಯಾದವರು ಇದ್ದರೆ ಯಾವುದೇ ಕಾರಣಕ್ಕೂ ಅವರ ಬಗ್ಗೆ ಕನಿಕರ ಬೇಡ. ಅಂತಹವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳುವಂತೆ ವೃತ್ತ ನಿರೀಕ್ಷಕರುಗಳಿಗೆ ಹಾಗೂ ಸಬ್ ಇನ್ಸ್ಪೆಕ್ಟರ್ಗಳಿಗೆ ಸೂಚಿಸಿದರು.
ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜನರ ಬದುಕಿನ ನಡುವೆ ಚೆಲ್ಲಾಟವಾಡಿದರೆ ಸಹಿಸಲು ಆಗುವುದಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಕಸುಬುಗಳನ್ನು ಬಿಟ್ಟು ಉತ್ತಮ ಬದುಕು ಸಾಗಿಸಿ. ನೀವು ಸ್ವಾವಲಂಬಿಗಳಾಗಿ ಬೇರೆಯವರಿಗೂ ಮಾದರಿಯಾಗಿ ಎಂದು ಎಚ್ಚರಿಕೆ ನೀಡಿದರು.
ಮಾನವೀಯತೆ ಮೆರೆದ ಡಿವೈಎಸ್ಪಿ : ಕೋರಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಳೆ ಕಳ್ಳನೊಬ್ಬ ಒಂದು ಕಾಲು ಇಲ್ಲದೆ ಪೆÇೀಷಕರ ಜತೆ ಬಂದಿದ್ದು , ಆತನ ಸ್ಥಿತಿ ನೋಡಿದ ನಾಗರಾಜ್ ಅವರು ಇಂತಹವರನ್ನು ಕರೆ ತರುವುದು ಬೇಡ. ಆತನ ಮೇಲಿರುವ ಪ್ರಕರಣಗಳನ್ನು ಕೈ ಬಿಡಿ ಎಂದು ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರಾದ ಚಂದ್ರಶೇಖರ್, ರಾಧಾಕೃಷ್ಣ, ರಾಮಕೃಷ್ಣಯ್ಯ , ಮಧುಸೂದನ್, ಸಬ್ ಇನ್ಸ್ಪೆಕ್ಟರ್ ರವಿಕುಮಾರ್, ಶಿವ ಕುಮಾರ್, ಭಾಸ್ಕರ್, ರಾಘವೇಂದ್ರ , ಸೋನಾರ್, ರಾಜು ಮತ್ತಿತರರಿದ್ದರು.