
ಚೇಳೂರು, ಜೂ.26- ಚೇಳೂರು ಪಟ್ಟಣದ ಮನೆಯ ಮುಂದೆ ಆಟವಾಡುತ್ತಿದ್ದ ರಂಜಿತಾ (6) ಎಂಬ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಮಗುವನ್ನು ನೆಲಕ್ಕೆ ಹೊರಳಿಸಿ ಕಾಲಿನ ಉಗುರಿನಿಂದ ಪರಚಿ ಆ ಮಗುವಿಗೆ ಬಾಯಿ ಹಾಕುವ ಮುನ್ನ ಮಗು ಜೋರಾಗಿ ಕೂಗಿಕೊಂಡಾಗ ಆ ಮಗುವಿನ ತಾಯಿ ತಕ್ಷಣ ಬಂದು ನಾಯಿಯನ್ನು ಓಡಿಸಿ ಮಗಳನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೋಳಿ ಮತ್ತು ಮಾಂಸದ ಅಂಗಡಿಯವರು ಕೋಳಿ ಮಾಂಸವನ್ನು ರಸ್ತೆಯ ಪಕ್ಕದಲ್ಲಿ ಹಾಕುವುದರಿಂದ ಬೀದಿ ನಾಯಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅಲ್ಲದೆ, ಮಕ್ಕಳ ಮೇಲೂ ನಾಯಿಗಳು ದಾಳಿ ಮಾಡುತ್ತವೆ. ಅಲ್ಲದೆ, ವಾಹನ ಸವಾರರಿಗೆ ಅಡ್ಡ ಬಂದು ಬೈಕ್ ಸವಾರರನ್ನು ಬೀಳುಸುತ್ತವೆ. ಹೀಗಿದ್ದರೂ ಸ್ಥಳಿಯ ಆಡಳಿತದವರು ಸಮ್ಮನೆ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.