ನವದೆಹಲಿ, ಜೂ.26-ಜೆಟ್ ಏರ್ವೇಸ್ ತನ್ನ ವಾಯುಯಾನ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು 10 ಶತಕೋಟಿ ಡಾಲರ್ಗಳ ವೆಚ್ಚದಲ್ಲಿ ಇನ್ನೂ 75 ಹೆಚ್ಚುವರಿ ಬೋಯಿಂಗ್ 737 ವಿಮಾನಗಳನ್ನು ಖರೀದಿಸಲಿದೆ. ಇದರೊಂದಿಗೆ ಸಂಸ್ಥೆಯ ಈ ವಿಮಾನಗಳ ಖರೀದಿ ಆದೇಶ 225ಕ್ಕೇ ಏರಿದಂತಾಗಿದೆ.
ಜೆಟ್ ಏರ್ವೇಸ್ 75 ಬಿ-737 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲಿದ್ದು, ಇದರ ಪ್ರಸ್ತುತ ಮೌಲ್ಯ 10 ಶತಕೋಟಿ ಡಾಲರ್ಗಳು ಎಂದು ಸಂಸ್ಥೆ ಮುಂಬೈ ಷೇರು ವಿನಿಮಯ (ಬಿಎಸ್ಇ) ಕೇಂದ್ರಕ್ಕೆ ಸಲ್ಲಿಸಿರುವ ವಿವರಣೆಯಲ್ಲಿ ತಿಳಿಸಿದೆ. ಈ ಮಾದರಿಯ ವಿಮಾನಗಳ ಖರೀದಿಗೆ ಜೆಟ್ ಸಂಸ್ಥೆ ಆದೇಶ ಸಲ್ಲಿಸಿರುವುದು ಇದು ಮೂರನೇ ಬಾರಿ. ಇತ್ತೀಚೆಗಷ್ಟೇ ಮೊದಲ ಹಂತದ ಬೋಯಿಂಗ್ ವಿಮಾನಗಳು ಸೇರ್ಪಡೆಯಾಗಿದ್ದವು.
ಜಾಗತಿಕವಾಗಿ ದೇಶೀಯ ವಾಯು ಸಂಚಾರ ಮಾರುಕಟ್ಟೆಯಲ್ಲಿ ಭಾರತ ಕ್ಷಿಪ್ರ ಬೆಳವಣಿಗೆ ಸಾಧಿಸುತ್ತಿದೆ. ದೇಶೀಯ ಮಾರುಕಟ್ಟೆ ಪಾಲಿನಲ್ಲಿ ಇಂಡಿಗೋ ನಂತರ ಜೆಟ್ ಏರ್ವೇಸ್ ಸಂಸ್ಥೆ ಎರಡನೇ ಸ್ಥಾನದಲ್ಲಿದೆ.
ಇಂಡಿಗೋ ಸಂಸ್ಥೆ ನಿರಂತರವಾಗಿ ತಮ್ಮ ವಾಯುಯಾನ ಸೇವೆಗೆ ಹೊಸ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಲೇ ಇದೆ. ಆದರೆ ಈ ವಿಷಯದಲ್ಲಿ ಜೆಟ್ ಸಂಸ್ಥೆಯದ್ದು ನಿಧಾನಗತಿ. ಈಗ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಸಾಮಥ್ರ್ಯ ವೃದ್ಧಿಸಿಕೊಳ್ಳಲು ಸಂಸ್ಥೆ ಮುಂದಾಗಿದೆ.