ಮೈಸೂರು, ಜೂ.26- ವಿದೇಶಿ ವಿದ್ಯಾರ್ಥಿಗಳ ವಾಸಕ್ಕಾಗಿ ಅಕ್ರಮವಾಗಿ ಪ್ರವೇಶ ಪತ್ರ ನೀಡುತ್ತಿದ್ದ ನಗರದ ಕಾಲೇಜೊಂದರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀಕಾಂತ ಮಹಿಳಾ ಪದವಿ ಕಾಲೇಜು ಮತ್ತು ಆಡಳಿತ ಮಂಡಳಿ ವಿರುದ್ಧ ಕೆಆರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಟಿ ಸ್ಪೆಷಲ್ ಬ್ರಾಂಚ್ನಲ್ಲಿ ವಿದೇಶಿ ವಿದ್ಯಾರ್ಥಿಗಳ ವಾಸ ವಿಸ್ತರಣೆ ಕಡತ ಪರಿಶೀಲನೆ ಸಂದರ್ಭದಲ್ಲಿ ಶ್ರೀಕಾಂತ ಕಾಲೇಜಿನಲ್ಲಿ ಅಕ್ರಮ ಪ್ರವೇಶ ಪತ್ರ ನೀಡುತ್ತಿರುವುದು ತಿಳಿದುಬಂದಿದೆ.
ವಿದೇಶಿ ವಿದ್ಯಾರ್ಥಿಗಳ ವಾಸ ವಿಸ್ತರಣೆಗಾಗಿ ಶ್ರೀಕಾಂತ ಕಾಲೇಜಿನಲ್ಲಿ ಸುಳ್ಳು ವ್ಯಾಸಂಗ ಪ್ರಮಾಣ ಪತ್ರ ನೀಡುತ್ತಿದೆ ಎಂಬ ಆರೋಪದಡಿ ಕೇಸು ದಾಖಲಿಸಲಾಗಿದೆ. ಶ್ರೀಕಾಂತ ಕಾಲೇಜಿನಲ್ಲಿ ಇಲ್ಲದ ಡಿಪ್ಲಮೋ ಕೋರ್ಸ್ಗಳಿಗೆ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ ವಾಸ ವಿಸ್ತರಣೆಗೆ ಕಾಲೇಜಿನಿಂದ ಅನುಮತಿ ನೀಡಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದರು.
ಪೆÇಲೀಸರು ತನಿಖೆ ಸಂದರ್ಭದಲ್ಲಿ ಮೈಸೂರು ವಿವಿಗೆ ಪತ್ರ ಬರೆದು ಶ್ರೀಕಾಂತ ಕಾಲೇಜಿನಲ್ಲಿ ಡಿಪೆÇ್ಲಮೋ ಕೋರ್ಸ್ಗೆ ಅನುಮತಿ ಇದೆಯೇ ಎಂದು ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ ವಿವಿ ಅವರು ಶ್ರೀಕಾಂತ ಕಾಲೇಜಿನಲ್ಲಿ ಕೇವಲ ಬಿಎ, ಬಿಕಾಂಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಪೆÇಲೀಸರು ಕಾಲೇಜಿನ ವಿರುದ್ಧ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿದೇಶಿ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವ 20 ವಿದೇಶಿ ವಿದ್ಯಾರ್ಥಿಗಳಿಗೆ ಈ ಕೂಡಲೇ ದೇಶ ತೊರೆಯುವಂತೆ ಪೆÇಲೀಸರು ಸೂಚಿಸಿದ್ದಾರೆ. ಈ ಪ್ರಕರಣವನ್ನು ಸಿಎಸ್ಬಿ ಇನ್ಸ್ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿಯನ್ನು ನಗರ ಪೆÇಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ್ರಾವ್ ಪ್ರಶಂಸಿಸಿದ್ದಾರೆ.
ವಿದೇಶಿ ವಿದ್ಯಾರ್ಥಿಗಳ ವಾಸ ವಿಸ್ತರಣೆಗೆ ಸುಳ್ಳು ವ್ಯಾಸಂಗ ಪ್ರಮಾಣ ಪತ್ರ ನೀಡಿದಲ್ಲಿ ಅಥವಾ ಅಕ್ರಮವಾಗಿ ಕೋರ್ಸ್ಗಳಿಗೆ ಪ್ರವೇಶಾತಿ ನೀಡಿದ್ದಲ್ಲಿ ಸಂಬಂಧಪಟ್ಟ ಕಾಲೇಜು ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೆÇಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.