![Wind-turbine-704999](http://kannada.vartamitra.com/wp-content/uploads/2018/06/Wind-turbine-704999-642x381.jpg)
ಬೊಕಾರೊ/ಲೊಹರ್‍ಡಾಗಾ, ಜೂ.26-ಜಾರ್ಖಂಡ್‍ನ ಈ ಎರಡು ಜಿಲ್ಲೆಗಳಲ್ಲಿ ಮಿಂಚು-ಗುಡುಗು-ಸಿಡಲುಗಳ ಆರ್ಭಟಕ್ಕೆ ಐವರು ಮೃತಪಟ್ಟು ಕೆಲವರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಬೊಕಾರೊ ಜಿಲ್ಲೆಯ ಅಲ್ಕುಷಾ ಗ್ರಾಮದಲ್ಲಿ ನಿನ್ನೆ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ನಾಲ್ವರು ಬಾಲಕರು ಮನೆಯೊಂದರ ಹೊರಗೆ ಆಶ್ರಯ ಪಡೆದಿದ್ದರು. ಆಗ ಸಿಡಿಲು ಬಡಿದು ನಾಲ್ವರು ಮೃತಪಟ್ಟರು. ಇದೇ ಗ್ರಾಮದ ಜರ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಬಾಲಕಿಯೊಬ್ಬಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಾಗಿರುವ ಆಕೆಯ ಸ್ಥಿತಿ ಶೋಚನೀಯವಾಗಿದೆ. ಲೊಹರ್‍ಡಾಗಾ ಜಿಲ್ಲೆಯ ಪೆರಾಪಟ್ ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಅಸುನೀಗಿದ್ದಾನೆ.