ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿನಿ ಪತ್ತೆ

ಚನ್ನಪಟ್ಟಣ, ಜೂ.25- ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿಯನ್ನು ಆಕೆಯ ಪ್ರಿಯಕರನ ಜೊತೆಯಲ್ಲಿಯೇ ಅಕ್ಕೂರು ಪೆÇಲೀಸರು ಪತ್ತೆ ಹಚ್ಚಿದ್ದಾರೆ. ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿನಿ ಸಿರಿಕಾ (18) (ಹೆಸರು ಬದಲಾಯಿಸಲಾಗಿದೆ).ಜೂ.8ರಂದು ಹೊರಗೆ ಹೋಗಿ ಬರುತ್ತೇನೆಂದು ಹೋದವಳು ಮನೆಗೆ ಬಾರದೆ ನಾಪತ್ತೆ ಯಾಗಿದ್ದಳು.ವಿದ್ಯಾರ್ಥಿನಿಯ ಪೆÇೀಷಕರು ತಮ್ಮ ಮಗಳನ್ನು ಗ್ರಾಮದ ಲೇಟ್ ಚಲ್ಲಯ್ಯ ಎಂಬುವರ ಮಗ ಕುಮಾರ್ ಅಪಹರಣ ಮಾಡಿದ್ದಾನೆಂದು ಗಂಭೀರವಾಗಿ ಆರೋಪಿಸಿ ಅಕ್ಕೂರು ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಅಕ್ಕೂರು ಪೆÇಲೀಸ್ ಠಾಣೆಯ ಪಿಎಸ್‍ಐ ಸದಾನಂದ ಹಾಗೂ ಸಿಬ್ಬಂದಿ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣವನ್ನು ಬೇಧಿಸಿ ಮಾಗಡಿಯಲ್ಲಿದ್ದ ವಿದ್ಯಾರ್ಥಿನಿ ಹಾಗೂ ಆರೋಪಿ ಕುಮಾರ್‍ನನ್ನು ವಶಕ್ಕೆ ಪಡೆದಿದ್ದಾರೆ.
ವಿದ್ಯಾರ್ಥಿನಿ ಹಾಗೂ ಅದೇ ಗ್ರಾಮದ ಕುಮಾರ್ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆಗೆ ಎರಡು ಮನೆಯಲ್ಲಿ ವಿರೋಧ ಬಂದಿದ್ದರಿಂದ ಸ್ವಯಂ ಪ್ರೇರಿತರಾಗಿ ಮನೆ ಬಿಟ್ಟು ಹೋಗಿದ್ದಾಗಿ ವಿಚಾರಣೆಯ ಸಂದರ್ಭದಲ್ಲಿ ವಿದ್ಯಾರ್ಥಿನಿ ತಿಳಿಸಿದ್ದಾರೆ. ಮಾಗಡಿಯ ದೇವಾಲಯವೊಂದರಲ್ಲಿ ವಿವಾಹ ಮಾಡಿಕೊಂಡಿದ್ದ ಇವರಿಬ್ಬರು ನಗರದ ಸಬ್‍ರಿಜಿಸ್ಟರ್ ಕಛೇರಿಯಲ್ಲಿ ವಿವಾಹ ನೊಂದಣಿ ಕೂಡ ಮಾಡಿಸಿಕೊಂಡಿದ್ದಾರೆ.
ಮಹಿಳಾ ಸಂಘದಿಂದ ಪ್ರತಿಭಟನೆ:
ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಣ ಮಾಡಲಾಗಿದೆ. ಪತ್ತೆಯಾಗಿರುವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಹಾಗೂ ಇಂತಹ ಪ್ರಕರಣಕ್ಕೆ ಸಹಕರಿಸಿದವರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಹೋರಾಟದ ಮುಖ್ಯಸ್ಥೆ ಸುಕನ್ಯ ಠಾಣೆಯಲ್ಲಿ ವಿದ್ಯಾರ್ಥಿನಿಯ ಪೆÇೀಷಕರೊಡಗೂಡಿ ಪ್ರತಿಭಟನೆ ನಡೆಸಿದ್ದರು. ಪ್ರಿಯಕರ ಕುಮಾರನ ಜೊತೆ ವಿವಾಹವಾಗಿದ್ದ ಆಕೆ ನನ್ನ ದಾಖಲಾತಿಗಳನ್ನು ಪರಿಶೀಲಿಸಬೇಕು ನಾನೇ ಸ್ವಯಂ ನಿರ್ಧಾರ ತೆಗೆದುಕೊಂಡು ಆತನ ಜೊತೆ ಹೋಗಿ ಕಾನೂನಿನಡಿ ವಿವಾಹವಾಗಿರುವುದಾಗಿ ಪೆÇಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಆರೋಪಿ ಕುಮಾರನಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಇತ್ತೆಂದು ಕೆಲ ತಿಂಗಳ ಹಿಂದೆ ಆಕೆಗೆ ಹಿಂಸೆ ನೀಡಿ ಮನೆ ತೊರೆಯುವಂತೆ ಮಾಡಿದ್ದಾನೆಂದು ವಿದ್ಯಾರ್ಥಿನಿಯ ಪೆÇೀಷಕರು ಆರೋಪಿಸಿದ್ದಾರೆ. ಆರೋಪಿ ಕುಮಾರನಿಂದ ದೌರ್ಜನ್ಯ ಹಾಗೂ ಮೋಸಕ್ಕೆ ಒಳಗಾದವರು ಯಾರು ಮುಂದೆ ಬಂದು ದೂರು ನೀಡದ ಕಾರಣ ಆತನ ಮೇಲೆ ಕ್ರಮ ಜರುಗಿಸಲು ಸಾಧ್ಯವಿಲ್ಲವೆಂದು ಪೆÇಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ