ಕೇಂದ್ರಪಡಾ: ಜೂ-25: ವರದಕ್ಷಿಣೆ ಪದ್ಧತಿ ಕಾನೂನು ಬಾಹೀರವೆಂದು ತಿಳಿದಿದ್ದರೂ ಒಂದಲ್ಲ ಒಂದುರೀತಿಯಲ್ಲಿ ಬೆಲೆಬಾಳುವ ವಸ್ತುಗಳು, ಹಣ, ವಾಹನಗಳ ಮೂಲಕ ಬೇಡಿಕೆಗಳನ್ನು ಇಟ್ಟು ಅದ್ದೂರಿ ವಿವಾಹವಾಗುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ಶಿಕ್ಷಕ ವರದಕ್ಷಿಣೆ ಬದಲು ಗಿಡಗಳನ್ನು ನೀಡುವಂತೆ ಕೇಳಿ ಇತರರಿಗೆ ಮಾದರಿಯಾಗಿರುವ ಸಂಗತಿ ವರದಿಯಾಗಿದೆ.
ವೃತ್ತಿಯಲ್ಲಿ ಅಧ್ಯಾಪಕರೊಬ್ಬರು ತಮ್ಮ ಮದುವೆಗೆ ವರದಕ್ಷಿಣೆ ಬದಲು 1001 ಗಿಡಗಳನ್ನು ನೀಡುವಂತೆ ವಧುವಿನ ಹೆತ್ತವರಿಗೆ ಕೇಳುವ ಮೂಲಕ ಪರಿಸರ ಕಾಳಜಿ ಮೆರೆದಿರುವ ವಿಶೇಷ ಘಟನೆ ಒಡಿಶಾದ ಕೇಂದ್ರಪಡಾ ಜಿಲ್ಲೆಯಲ್ಲಿ ನಡೆದಿದೆ.
33 ವರ್ಷದ ಸರೋತ್ ಕಾಂತಾ ಬಿಸ್ವಾಲ್ ಎಂಬ ಪರಿಸರ ಪ್ರೇಮಿ ಅಧ್ಯಾಪಕ ತಮ್ಮ ವಿವಾಹದಲ್ಲಿ ವರದಕ್ಷಿಣೆ ಬದಲಿಗೆ ಗಿಡಗಳನ್ನು ನೀಡಿದರೆ ಸಾಕು ಎಂದಿದ್ದಾರೆ.
ವರದಕ್ಷಿಣೆ ಪದ್ಧತಿಯನ್ನು ವಿರೋಧಿಸುತ್ತೇನೆ. ಬಾಲ್ಯದಿಂದಲೂ ನಾನು ಪರಿಸರ ಪ್ರೇಮಿ. ಹಾಗಾಗು ವರದಕ್ಷಿಣೆ ಬದಲು ಫಲ ನೀಡುವ ಸಸಿಗಳನ್ನು ನೀಡಿ ಎಂದು ಕೇಳಿದ್ದೆ. ಶನಿವಾರ ನಮ್ಮ ವಿವಾಹ ನಡೆದಿದ್ದು, ಹಲವಾರು ಗಿಡಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ಪರಿಸರ ಪ್ರೇಮಿ ಸರೋತ್ ಆದರ್ಶ ವಿವಾಹಕ್ಕೆ ಸಾಕ್ಷಿಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Odisha, A unique wedding gift Wedding Gift,Dowry