ನವದೆಹಲಿ:ಜೂ-೨೫: ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ತೊರೆದಿರುವ ವಿಎಚ್ಪಿ ಮಾಜಿ ಮುಖಂಡ ಪ್ರವೀಣ್ ತೊಗಾಡಿಯಾ ಈಗ ಹೊಸ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ.
ವಿಎಚ್ಪಿಗೆ ಪರ್ಯಾಯವಾಗಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹುಟ್ಟುಹಾಕಿದ್ದಾರೆ. ಮುಂಬರುವ ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ಹಿಂದೂ ಮತಗಳನ್ನು ಕ್ರೋಢೀಕರಣ ಮಾಡುವುದೇ ಸಂಘಟನೆಯ ಉದ್ದೇಶ ಎನ್ನಲಾಗಿದೆ.
ಹೊಸ ಸಂಘಟನೆ ಸ್ಥಾಪನೆ ಮಾಡಿ ಮಾತನಾಡಿದ ಪ್ರವೀಣ ತೊಗಾಡಿಯಾ, ಪ್ರಸ್ತುತ ನರೇಂದ್ರ ಮೋದಿ ನೇತ್ವತ್ವದ ಕೇಂದ್ರ ಸರ್ಕಾರ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಾಗಿ ನಂಬಿಸಿ ಕೋಟ್ಯಂತರ ಹಿಂದೂಗಳಿಗೆ ವಂಚಿಸಿದ್ದಾರೆ ಎಂದಿದ್ದಾರೆ.
ನಮ್ಮ ಹೊಸ ಸಂಘಟನೆ ಲೋಕಸಭೆಯಲ್ಲಿರಾಮಮಂದಿರ ನಿಮಾರ್ಣಕ್ಕೆ ಲೋಕಸಭೆಯಲ್ಲಿ ಕಾನೂನು ರಚನೆ ಮಾಡುವುದಾಗಿ ಘೋಷಿಸಿದರು. ಹೊಸ ಸಂಘಟನೆ ಹಿಂದೂಗಳ ರಕ್ಷಣೆ ಹಾಗೂ ಶ್ರೆಯೋಭಿವೃದ್ಧಿಗೆ ಶ್ರಮಿಸಲಿದೆ ಎಂದು ಘೋಷಿಸಿದರು. ಆಗಸ್ಟ್ನಲ್ಲಿ ಲಕ್ನೋದಿಂದ ಅಯೋಧ್ಯವರೆಗೂ ಯಾತ್ರೆ ಕೈಗೊಳ್ಳುವುದಾಗಿ ಅವರು ಇದೇ ವೇಳೆ ಪ್ರಕಟಿಸಿದ್ದಾರೆ.
International hindu parishad, praveen togadia