
ಮೈಸೂರು,ಜೂ.25- ಇಂದಿರಾ ಕ್ಯಾಂಟೀನ್ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಉದಯಗಿರಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಗೌಸಿಯಾ ನಗರದ ನಿವಾಸಿ ಸಿದ್ದಾಂ(25), ಕೆ.ಎನ್.ಪುರದ ಮಹಮ್ಮದ್ ಶಾದಿಕ್(28) ಬಂಧಿತರು. ಆರೋಪಿಗಳು ಕಳೆದ 15 ದಿನಗಳ ಹಿಂದೆ ಉದಯಗಿರಿ ಬೀಡಿ ಕಾಲೋನಿಯಲ್ಲಿರುವ ಇಂದಿರಾ ಕ್ಯಾಂಟೀನ್ನ ಬಾಗಿಲು ಮುರಿದು ಒಳನುಗ್ಗಿ ಪಾತ್ರೆ, ತಟ್ಟೆ, ನಲ್ಲಿಯನ್ನು ಕಳವು ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಸಿಸಿಟಿವಿ ಪರಿಶೀಲಿಸಿ ಈ ಇಬ್ಬರನ್ನು ಬಂಧಿಸಿದ್ದಾರೆ. ಉದಯಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.