
ತುಮಕೂರು,ಜೂ.24- ಕೋರ್ಟ್ ಆವರಣದಲ್ಲಿ ನಿವೇಶನ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಗುಬ್ಬಿ ತಾಲ್ಲೂಕಿನ ಲಿಂಗಮ್ಮನಹಳ್ಳಿ ನಿವಾಸಿಗಳು ಕೆ.ಜಿ.ಟೆಂಪಲ್ನಲ್ಲಿರುವ ನಿವೇಶನ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಗಾಗಿ ಗುಬ್ಬಿ ಪಟ್ಟಣದ ನ್ಯಾಯಾಲಯಕ್ಕೆ ಹಾಜರಾಗಿ ಹೊರಬಂದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಅಲೀಂಪುಲ್ಲಾ, ರಫೀಕ್ ಅಹಮ್ಮದ್, ಷಫಿ ಅಹಮದ್ ಎಂಬುವರು ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಮಾಡಿದ್ದ ಅಮಿದ್ ಪಾಷ್, ಜಾವಿರ್ ಅಹಮದ್ ಎಂಬುವರನ್ನು ಪೆÇಲೀಸರು ವಶಕ್ಕೆ ಪಡೆದು ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ. ಗುಬ್ಬಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.