ನಕ್ಸಲರು ರೈಲು ಹಳಿಗಳನ್ನು ಕಿತ್ತೆಸೆದ ಪರಿಣಾಮ, ಉರುಳಿ ಬಿದ್ದ ರೈಲು

ರಾಯ್‍ಪುರ್, ಜೂ.24-ನಕ್ಸಲರು ರೈಲು ಹಳಿಗಳನ್ನು ಕಿತ್ತೆಸೆದ ಪರಿಣಾಮ ಗೂಡ್ಸ್ ರೈಲಿನ ಎಂಜಿನ್ ಮತ್ತು ಅದರ ಎಂಟು ಬೋಗಿಗಳು ಹಳಿ ತಪ್ಪಿ ಸೇತುವೆಯಿಂದ ಉರುಳಿ ಬಿದ್ದ ಘಟನೆ ಛತ್ತೀಸ್‍ಗಢದ ದಂತೇವಾಡದ ಕಿರಂಡುಲ್-ವಿಶಾಖಪಟ್ಟಣಂ ಮಾರ್ಗದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ರೈಲು ಸಂಚಾರಕ್ಕೆ ಅಡ್ಡಿಯುಂಟು ಮಾಡಲು ನಕ್ಸಲರು ಭನ್ಸಿ ಮತ್ತು ಕಮಲೂರು ನಡುವಣ ಮಾರ್ಗದ ರೈಲು ಹಳಿಯನ್ನು ತೆಗೆದಿದ್ದರು. ಈ ಮಾರ್ಗದಲ್ಲಿ ಬಂದ ಗೂಡ್ಸ್ ರೈಲಿನ ಎಂಜಿನ್ ಮತ್ತು ಎಂಟು ವ್ಯಾಗನ್‍ಗಳು ಹಳಿ ತಪ್ಪಿಸ ಪುಟ್ಟ ಉಪನದಿಗೆ ಕಟ್ಟಲಾಗಿದ್ದ ಸೇತುವೆಯಿಂದ ಕೆಳಗೆ ಉರುಳಿತು ಎಂದು ದಂತೇವಾಡ ಪೆÇಲೀಸ್ ವರಿಷ್ಠಾಧಿಕಾರಿ ಕಾಮಲೋಚನ್ ಕಶ್ಯಫ್ ತಿಳಿಸಿದ್ದಾರೆ.
ಈ ಗೂಡ್ಸ್ ರೈಲಿನಲ್ಲಿ ಕಬ್ಬಿಣದ ಅದಿರು ಇತ್ತು. ಇದು ಬಚೇಲಿಯಿಂದ ವಿಶಾಖಪಟ್ಟಣಂತೆ ತೆರಳುತ್ತಿತ್ತು. ರಾಜಧಾನಿ ರಾಯ್‍ಪುರ್‍ನಿಂದ 450 ಕಿ.ಮೀ.ದೂರದಲ್ಲಿರುವ ಕಮಲೂರು ಬಳಿ ಅರಣ್ಯ ಪ್ರದೇಶದಲ್ಲಿ ಇಂದು 1ರ ನಸುಕಿನಲ್ಲಿ ಈ ಘಟನೆ ನಡೆಯಿತು.
ಈ ಘಟನೆಯಿಂದಾಗಿ ಕೆಲಕಾಲ ಈ ಮಾರ್ಗದ ಇತರ ರೈಲುಗಳ ಸಂಚಾರಕ್ಕೆ ಅಡಚಣೆಯಾಯಿತು. ನಕ್ಸಲರ ಪ್ರಾಬಲ್ಯವಿರುವ ದಂತೇವಾಡದ ರೈಲು ಮಾರ್ಗಗಳಿಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮಾವೋವಾದಿಗಳಿಗೆ ತೀವ್ರ ಶೋಧ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ