ಫಿರೋಜಾಬಾದ್, ಜೂ.24-ಕೇವಲ 90 ದಿನಕ್ಕೆಂದು ವೀಸಾ ಪಡೆದು 20 ವರ್ಷಗಳಿಂದ ಭಾರತದಲ್ಲಿ ತಲೆಮರೆಸಿಕೊಂಡಿದ್ದ ಪಾಕಿಸ್ತಾನದ ಮಹಿಳೆಯನ್ನು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಎಲ್ಐಯು ತಂಡ ಬಂಧಿಸಿದೆ. ಫೌಜಿಯಾ ಖಾನ್ ಎಂಬುವವರ ಮಗಳಾದ ಅಖ್ತಿಯಾರ್ ಖಾನ್ ಬಂದಿತ ಮಹಿಳೆ.
1998ರಲ್ಲಿ 90 ದಿನಗಳ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಈಕೆ ಹೆಚ್ಚು ದಿನಗಳ ಕಾಲ ಇಲ್ಲೇ ಇರಲು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಸರ್ಕಾರ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಮರಳದೆ ಇಲ್ಲೇ ತಲೆಮರೆಸಿಕೊಂಡಿದ್ದರು.
ಇದನ್ನು ತಿಳಿದ ಗುಪ್ತಚರ ಇಲಾಖೆ ಮಹಿಳೆ ಮೇಲೆ ನಿಗಾ ಇಟ್ಟಿತ್ತು. ಅಲ್ಲದೆ ಈ ಕುರಿತಂತೆ ತನಿಖೆ ನಡೆಸುವಂತೆಯೂ ಪೆÇಲೀಸರಿಗೆ ಆದೇಶಿಸಿತ್ತು. ಪಾಸ್ಪೆÇೀರ್ಟ್ ಅವಧಿ ಮುಗಿದರೂ ಭಾರತದಲ್ಲಿ ನೆಲೆಸಿದ್ದ ಕಾರಣ ಕುಫಿಯಾ ಪೆÇಲೀಸರು ಈಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೆÇಲೀಸ್ ಅಧಿಕಾರಿ ರಾಹುಲ್ ಯಾದವೇಂದ್ರ 1998ರಲ್ಲಿ ಫಿರೋಜಾಬಾದ್ಗೆ ಬಂದಿದ್ದ ಈಕೆ ಅಲ್ಲಿಂದಲೇ ಕಾಣೆಯಾಗಿದ್ದರು. ಅಂದಿನಿಂದ ಎಲ್ಐಯು ತಂಡ ಈಕೆಯ ಹುಡುಕಾಟದಲ್ಲಿ ತೊಡಗಿತ್ತು. ಎಲ್ಲ ಮಾಹಿತಿ ಆಧರಿಸಿ ಇಂದು ಆಕೆಯನ್ನು ಬಂಧಿಸಲಾಗಿದ್ದು, ಈ ಪ್ರಕರಣ ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಸಿದ್ದಾದ್ದರಿಂದ ಮುಂದಿನ ಕ್ರಮವನ್ನು ಅವರೇ ವಹಿಸುತ್ತಾರೆ ಎಂದು ಹೇಳಿದರು. ಕಳೆದ 20 ವರ್ಷಗಳಿಂದ ಈಕೆ ಹೈದರಾಬಾದ್ನ ಲತೀಫಾಭಾಗ್ನಲ್ಲಿರುವ ಸಂಬಂಧಿಕರ ಮನೆಯೊಂದರಲ್ಲಿ ಕದ್ದುಮುಚ್ಚಿ ವಾಸಿಸುತ್ತಿದ್ದರು ಎಂದು ತಿಳಿಸಿದರು.