
ರಾಯಗಢ, ಜೂ.23- ಕಪ್ಪಗಿದ್ದಾಳೆಂದು ತಮಾಷೆ ಮಾಡಿದ ಕಾರಣಕ್ಕೆ ಕುಪಿತಗೊಂಡ ಮಹಿಳೆಯೊಬ್ಬರು ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ಆಹಾರದಲ್ಲಿ ವಿಷ ಹಾಕಿದ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರ ರಾಯಗಢದಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರe್ಞÁ ಸರ್ವಾಸೆ ಆಹಾರಕ್ಕೆ ವಿಷ ಹಾಕಿದ ಮಹಿಳೆ ಎಂದು ಗುರುತಿಸಲಾಗಿದೆ.
ರಾಯಗಢದಲ್ಲಿರುವ ಮಹದ್ ಗ್ರಾಮದಲ್ಲಿ ಸುಭಾಷ್ ಮಾನೆ ಎಂಬುವವರ ಕುಟುಂಬದಲ್ಲಿ ಸಮಾರಂಭವೊಂದು ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರe್ಞÁಳನ್ನು ಕೆಲ ಸಂಬಂಧಿಕರು ಆಕೆಯ ಕಪ್ಪು ವರ್ಣ ಕುರಿತು ಲೇವಡಿ ಮಾಡಿದ್ದರು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಪ್ರe್ಞÁ ಸಮಾರಂಭದಲ್ಲಿ ತಯಾರಿಸಲಾಗಿದ್ದ ಆಹಾರಕ್ಕೆ ವಿಷ ಹಾಕಿದ್ದಾಳೆ. ಪರಿಣಾಮ ವಿಷಾಹಾರ ಸೇವಿಸಿ ನಾಲ್ವರು ಮಕ್ಕಳು, ಓರ್ವ ವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 80 ಮಂದಿ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಕುಟುಂಬ ಕಲಹದಿಂದಾಗಿ ಆಹಾರಕ್ಕೆ ವಿಷ ಹಾಕಿದ್ದಾಗಿ ಮಹಿಳೆ ತಪೆÇ್ಪಪ್ಪಿಕೊಂಡಿದ್ದಾಳೆ. ಘಟನೆಯಲ್ಲಿ 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಐವರು ಸಾವನ್ನಪ್ಪಿದ್ದಾರೆಂದು ರಾಯಗಢ ಎಸ್‍ಪಿ ಅನಿಲ್ ಪರಸ್ಕರ್ ತಿಳಿಸಿದ್ದಾರೆ.