
ಬ್ರುಸ್ಸೆಲ್ಸ್, ಜೂ.23-ವಿದೇಶಿ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬೆಲ್ಜಿಯಂ ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಡಿಡಿಯರ್ ರೇಂಡೆರ್ಸ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಫ್ರಾನ್ಸ್, ಇಟಲಿ, ಮತ್ತು ಲಕ್ಸೆಂಬರ್ಗ್ ಭೇಟಿ ಬಳಿಕ ನಾಲ್ಕು ದೇಶಗಳ ಪ್ರವಾಸದ ಕೊನೆ ಹಂತವಾಗಿ ಬೆಲ್ಜಿಯಂಗೆ ಆಗಮಿಸಿದ ಸುಷ್ಮಾ ಅವರಿಗೆ ರಾಜಧಾನಿ ಬುಸ್ಸೆಲ್ಸ್ನಲ್ಲಿ ಸ್ವಾಗತ ಕೋರಲಾಯಿತು. ಬಳಿಕ ಅವರು ಎಗ್ಮೊಂಟ್ ಪ್ಯಾಲೆಸ್ನಲ್ಲಿ ಉಪ ಪ್ರಧಾನಿ ರೇಂಡೆರ್ಸ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ವ್ಯಾಪಕ ಪರಾಮರ್ಶೆ ನಡೆಸಿದರು ಹಾಗು ಪ್ರಾದೇಶಿಕ ಮತ್ತು ಬಹು ವಿಷಯಗಳ ಕುರಿತ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.