ಲಕ್ನೋ,ಜೂ.23- ಸಂಬಂಧಿಯೊಬ್ಬರ ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಬಾಲಕಿಯ ಮೇಲೆ 10 ಕಾಮುಕರು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಉತ್ತರ ಪ್ರದೇಶದ ಬಲುಂದ್ ಶಹರ್ನ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ತನ್ನ ಕುಟುಂಬದವರ ಜೊತೆ ಸೋದರಸಂಬಂಧಿ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಚೇರಿ ಗ್ರಾಮಕ್ಕೆ ಬಂದಿದ್ದಳು.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಬಂದಿದ್ದ ನಿತೀಶ್ ಮತ್ತು ರೋಹಿತ್ ಪಕ್ಕದ ಗ್ರಾಮದ ದೇವಾಲಯಕ್ಕೆ ಬರುವಂತೆ ಬಾಲಕಿಯನ್ನು ಕೇಳಿಕೊಂಡಿದ್ದಾರೆ. ಸಂತ್ರಸ್ತೆ ಒಪ್ಪಿಕೊಂಡು ಅವರ ಜೊತೆ ಹೋಗಿದ್ದಾಳೆ. ಅಷ್ಟೋತ್ತಿಗಾಗಲೇ ಯುವಕರ ಗುಂಪೆÇಂದು ಅಲ್ಲಿ ಕಾಯುತ್ತಿದ್ದು, 10 ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂಬಂಧ ನಿತೀಶ್ (18) ಆತನ ಸಹೋದರ ರೋಹಿತ್‍ನನ್ನು ಐಪಿಸಿ ಸೆಕ್ಷನ್ 363 ಮತ್ತು 376ರಡಿ ಬಂಧಿಸಲಾಗಿದೆ.