ಶಾಂತಿ ಶೃಂಗಸಭೆ ಯಶಸ್ವಿನ ನಂತರವೂ ವಿನಾಶಕಾರಿ ಅಣ್ವಸ್ತ್ರ ಆತಂಕವಿದೆ – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಜೂ.23-ಐತಿಹಾಸಿಕ ಶಾಂತಿ ಶೃಂಗಸಭೆ ಯಶಸ್ವಿನ ನಂತರವೂ ಉತ್ತರ ಕೊರಿಯಾದಿಂದ ವಿನಾಶಕಾರಿ ಅಣ್ವಸ್ತ್ರ ಆತಂಕವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಮಾನಿ ವ್ಯಕ್ತಪಡಿಸಿದ್ದಾರೆ.
ಸಿಂಗಪುರ್‍ನಲ್ಲಿ ಜೂ.12ರಂದು ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವೆ ಚಾರಿತ್ರಿಕ ಶೃಂಗಸಭೆ ನಡೆದು ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಬಗ್ಗೆ ಒಪ್ಪಂದವಾಗಿತ್ತು. ಆದಾದ ನಂತರ ವಾಷಿಂಗ್ಟನ್‍ಗೆ ಹಿಂದಿರುಗಿದ್ದ ಟ್ರಂಪ್, ಇನ್ನು ಮುಂದೆ ಉತ್ತರ ಕೊರಿಯಾದಿಂದ ವಿನಾಶಕಾರಿ ಅಣ್ವಸ್ತ್ರದ ಆತಂಕ ಇಲ್ಲ. ಇಂದು ರಾತ್ರಿ ನಾನು ನೆಮ್ಮದಿಯಿಂದ ನಿದ್ರೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಆದಾದ ಹತ್ತು ದಿನಗಳ ಬಳಿಕ ಟ್ರಂಪ್ ಹೇಳಿಕೆ ನೀಡಿ ಶೃಂಗಸಭೆ ಯಶಸ್ವಿನ ನಂತರವೂ ಉತ್ತರ ಕೊರಿಯಾದಿಂದ ಅಸಾಮಾನ್ಯ ಮತ್ತು ಅಸಾಧಾರಣ ಅಣ್ವಸ್ತ್ರ ಭೀತಿ ಇದೆ ಎಂದು ತಿಳಿಸಿ ಪ್ರಶ್ನಾರ್ಥಕ ಚಿಹ್ನೆ ಸೃಷ್ಟಿಗೆ ಕಾರಣವಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ