ಟೊಮೆಟೊ, ಕ್ಯಾರೆಟ್ ದರ ಏಕಾಏಕಿ ದುಪ್ಪಟ್ಟು; ಗ್ರಾಹಕರು ಕಂಗಾಲು!

ಬೆಂಗಳೂರು: ಮಾರುಕಟ್ಟೆಯಲ್ಲಿ ತರಕಾರಿ ದರ ಗಗನಕ್ಕೇರುತ್ತಿದ್ದು, ಗ್ರಾಹಕರು ಗೊಣಗುತ್ತಲೇ ಖರೀದಿಸುತ್ತಿದ್ದಾರೆ.

ಟೊಮೆಟೋ ಮತ್ತು ಕ್ಯಾರೆಟ್ ದರವಂತೂ ಏಕಾಏಕಿ ದುಪ್ಪಟ್ಟಾಗಿದೆ. ಅತಿಯಾದ ಮಳೆಯಿಂದ ತರಕಾರಿ ಕೊಳೆತು ಹೋಗುತ್ತಿರುವುದು ಹಾಗೂ ಲಾರಿ ಮುಷ್ಕರದಿಂದ ಮಾರುಕಟ್ಟೆಗೆ ಅಗತ್ಯ ತರಕಾರಿ ಬಾರದೇ ಇರುವುದು ದರ ಹೆಚ್ಚಳಕ್ಕೆ ಕಾರಣ ಎನ್ನಲಾಗ್ತಿದೆ.
10-15ರೂಪಾಯಿಗೆ ಸಿಗ್ತಿದ್ದ ಟೊಮೆಟೋ ಈಗ 25ರೂ. ಗಡಿ ದಾಟಿದೆ. ಹಾಗಿದ್ದರೆ, ನಾನಾ ಕಾರಣದಿಂದ ಎರ್ರಾಬಿರ್ರಿಯಾಗಿ ಏರಿಕೆಯಾಗಿರೋ ತರಕಾರಿಗಳ ಬೆಲೆಯ ಡಿಟೈಲ್ಸ್ ಹೀಗಿದೆ…

ತರಕಾರಿ      ಹಾಪ್ ಕಾಮ್ಸ್ (ಕೆಜಿ)
ಹಿರೇಕಾಯಿ– 62 ರೂಪಾಯಿ
ತೊಂಡೆಕಾಯಿ‌-    32 ರೂಪಾಯಿ
ಆಲೂಗಡ್ಡೆ –   30ರೂಪಾಯಿ
ಹುರುಳಿಕಾಯಿ-    66 ರೂಪಾಯಿ
ಟೊಮೆಟೋ-    25ರೂಪಾಯಿ
ದಪ್ಪ ಮೆಣಸಿನಕಾಯಿ-    80 ರೂಪಾಯಿ
ಕ್ಯಾರೆಟ್  –      35 ರೂಪಾಯಿ
ಈರುಳ್ಳಿ   –    21 ರೂಪಾಯಿ
ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ತರಕಾರಿ ಬೆಲೆ ಇನ್ನೂ ಏರಿಕೆಯಾಗಲಿದೆ ಎನ್ನುವ ಮೂಲಕ  ವ್ಯಾಪಾರಸ್ಥರು ಶಾಕ್‌ ಕೊಡುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ