
ಮಳವಳ್ಳಿ,ಜೂ.22- ತಾಲ್ಲೂಕಿನ ಗೌಡಿಗೆರೆ ಗೇಟ್ ಬಳಿ ಇರುವ ಜೆಪ್ಸಿ ಡೈರಿ ಮುಂಭಾಗ ಡೈರಿ ಏಜೆಂಟರುಗಳು ರೈತರ ಪರವಾಗಿ ಪ್ರತಿಭಟನೆ ನಡೆಸಿದರು. ಹಾಲಿನ ದರವನ್ನು ಕೆಎಂಎಫ್ 1 ರೂ.ಗೆ ಹೆಚ್ಚಳ ಮಾಡಿದ್ದು, ಅದರಂತೆ ನೀವು ಕೂಡ 1 ರೂ. ಹೆಚ್ಚಿನ ಹಣವನ್ನು ರೈತರಿಗೆ ನೀಡುವಂತೆ ಒತ್ತಾಯಿಸಿದರು.
ಜೆಪ್ಸಿ ಡೈರಿ ಪ್ರಾರಂಭವಾಗಿ 10 ವರ್ಷಗಳು ಕಳೆದಿದೆ. ಸಾಕಷ್ಟು ಅಭಿವೃದ್ದಿಯನ್ನು ಹೊಂದಿದ್ದು ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ಲಾಭ ಬರುತ್ತಿದೆ. ಹಾಗಾಗಿ ಸಂಕಷ್ಟದಲ್ಲಿರುವ ಹಾಗೂ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.
ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ರೈತರಿಗೆ 1 ರೂ. ಹೆಚ್ಚು ಮಾಡಿ ಹೈನುಗಾರಿಕೆಯನ್ನು ಪೆÇ್ರೀ ಆಗ್ರಹಿಸಿದ್ದಾರೆ. ಆಡಳಿತ ಮಂಡಳಿಯ ಅಸಿಸ್ಟೆಂಟ್ ಮ್ಯಾನೇಜರ್ ಸಂತೋಷ್ ಮಾತನಾಡಿ, ನಿಮ್ಮೆಲ್ಲರ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಪುನಃ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯ ನೇತೃತ್ವವನ್ನು ಏಜೆಂಟ್ ಪ್ರಭು ವಹಿಸಿದ್ದರು. ಏಜೆಂಟರಾದ ರವಿ, ಸೋಮಶೇಖರ್, ಚಂದ್ರು, ಮಹದೇವಯ್ಯ ಇನ್ನಿತರರು ಪಾಲ್ಗೊಂಡಿದ್ದರು.