ಮೈಸೂರು, ಜೂ.22- ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಿದರೆ ಅದು ಮೂರ್ಖತನವಾದೀತು ಎಂದು ಖ್ಯಾತ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಹೇಳಿದರು. ಕುವೆಂಪು ನಗರದಲ್ಲಿರುವ ಭೆರಪ್ಪ ಅವರ ನಿವಾಸಕ್ಕೆ ಸಂಸದ ಪ್ರತಾಪ್‍ಸಿಂಹ, ಶಾಸಕ ನಾಗೇಂದ್ರ ಅವರು ಇಂದು ಬೆಳಗ್ಗೆ ಭೇಟಿ ಮಾಡಿ ಕೇಂದ್ರ ಸರ್ಕಾರದ ಯೋಜನೆಗಳ ಕೈಪಿಡಿಯನ್ನು ನೀಡಿ ಕೇಂದ್ರದ ನಾಲ್ಕು ವರ್ಷಗಳ ಸಾಧನೆ ಹಾಗೂ ಮೈಸೂರು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭೆರಪ್ಪ ಅವರು, ನರೇಂದ್ರ ಮೋದಿ ಅವರನ್ನು ಒಂದು ಬಾರಿಯಲ್ಲ, ಮೂರು ಬಾರಿ ಗೆಲ್ಲಿಸಿದರೂ ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಭಾರತದ ಭವಿಷ್ಯ ಕಟ್ಟಲು ಮೋದಿ ಶ್ರಮಿಸುತ್ತಿದ್ದಾರೆ. ನಮ್ಮ ಶತೃರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಸೇರಿದಂತೆ ಸುತ್ತಮುತ್ತಲಿನ ರಾಷ್ಟ್ರಗಳ ಪ್ರೀತಿ-ವಿಶ್ವಾಸ ಗಳಿಸಲು ಪ್ರಧಾನಿ ಮುಂದಾಗಿದ್ದಾರೆ. ಇಂತಹವರನ್ನು ಎರಡು-ಮೂರು ಬಣಗಳು ಸೇರಿ ಸೋಲಿಸಲು ಮುಂದಾಗಿವೆ. ಹಾಗೆನಾದರೂ ಮೋದಿಯವರನ್ನು ಸೋಲಿಸಿದರೆ ಅದು ಮೂರ್ಖತನದ ಪರಮಾವಧಿ ಎಂದು ತಿಳಿಸಿದರು. ಹಿಂದೆ ಇದ್ದ ಯುಪಿಎ ಸರ್ಕಾರ ಏನು ಸಾಧನೆ ಮಾಡಿದೆ ಎಂದು ಪ್ರಶ್ನಿಸಿದ ಭೆರಪ್ಪನವರು, ಯಾವುದೇ ಒಂದು ಕೆಲಸ ಮಾಡಬೇಕಾದರೂ ಮೇಡಂ ಎಂದು ಹಿಂದೆ ಹೋಗುತ್ತಿದ್ದರು. ದೇಶದ ಅಭಿವೃದ್ಧಿ ಮಾಡಲು ಇಂತಹವರು ಬೇಕೆ ಎಂದು ಮಾರ್ಮಿಕವಾಗಿ ನುಡಿದರು.
ಮೋದಿಯವರನ್ನು ದ್ವೇಷಿಸುವ ಬದಲು ಅವರನ್ನು ಪ್ರೀತಿಸಿ ಎಂದು ಭೆರಪ್ಪ ಜನತೆಗೆ ಹೇಳಿದರು.