ಅರವಿಂದ್ ಲಿಮಿಟೆಡ್ ನಿಂದ ವಿನೂತನವಾದ ಬಟ್ಟೆ ಉತ್ಪನ್ನ ಮಾರುಕಟ್ಟೆಗೆ

 

ಬೆಂಗಳೂರು,ಜೂ.22-ವಿಶ್ವದಲ್ಲಿ ಅತಿದೊಡ್ಡದಾದ ಡೆನಿಂ ಶ್ರೇಣಿಯ ಬಟ್ಟೆ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾಗಿರುವ ಇನ್‍ವಿಸ್ತ ಜೊತೆ ಸೇರಿ ಅರವಿಂದ್ ಲಿಮಿಟೆಡ್ ಭಾರತದ ಮಾರುಕಟ್ಟೆಗೆ ವಿನೂತನವಾದ ಡೇನಿಮ್‍ಗಳನ್ನು ಬಿಡುಗಡೆ ಮಾಡಿದೆ ಎಂದು ಡೆನಿಮ್ಸ್ ವಿಭಾಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿರ್ ಆಕ್ತರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರವಿಂದ್ ಲಿಮಿಟೆಡ್ ಡೆನಿಂ ಫಾರ್ ಗುಡ್ ಬ್ರಾಂಡ್‍ನ ಉತ್ಪನ್ನಗಳ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ನಿರಂತರವಾಗಿ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಮತ್ತು ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಈ ಮೂಲಕ ನಾವು ಹೊಸ ಹೊಸ ವಿನ್ಯಾಸಗಳ ಜೊತೆಯಲ್ಲಿ ಆರಾಮದಾಯಕ ಹಾಗೂ ದೀರ್ಘ ಬಾಳಿಕೆ ಬರುವ ಉತ್ಪನ್ನಗಳನ್ನು ಅಭಿವೃದ್ದಿಪಡಿಸುತ್ತಿದ್ದೇವೆ ಎಂದು ಹೇಳಿದರು.

ಇಂಡಿಗೋ ಇನ್‍ಸ್ಟ್ರೈಡ್ ಲೈಫ್ ಸ್ಟೈಲ್‍ನ್ನು ಪ್ರತಿನಿಧಿಸುವ ಡೆನಿಂನಿಂದ ನಿಟ್‍ವರೆಗಿನ ಜವಳಿ ಉತ್ಪನ್ನಗಳ ಸಂಗ್ರಹ ಪ್ರಸ್ತುತಪಡಿಸಿದೆ ಎಂದು ತಿಳಿಸಿದರು.

ಅತ್ಯುತ್ತಮವಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಅರವಿಂದ್ ಮತ್ತು ಇನ್‍ವಿಸ್ತ ಗ್ರಾಹಕರಿಗೆ ವಿನೂತನ ಮಾದರಿಯ ಜವಳಿ ಉತ್ಪನ್ನಗಳನ್ನು ನೀಡುವ ಉದ್ದೇಶವಿಟ್ಟುಕೊಂಡಿದೆ. ಇನ್‍ವಿಸ್ತದ ಟ್ರೇಡ್ ಮಾರ್ಕ್ ಆಗಿರುವ ಲಿಕ್ರಾ ಟಿ400 ಮತ್ತು ಕೂಲ್‍ಮ್ಯಾಕ್ಸ್ ಎಂಬ ಪರಿಸರ ಸ್ನೇಹಿ ಮತ್ತು ಗ್ರಾಹಕರ ಸ್ನೇಹಿ ಉತ್ಪನ್ನಗಳನ್ನು ಪರಿಚಯಿಸಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ