ಲಕ್ನೋ, ಜೂ.21-ಭಯೋತ್ಪಾದಕರಿಗೆ ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣ ಪೂರೈಸಿದ ಪ್ರಮುಖ ಆರೋಪಿ ರಮೇಶ್ ಶಾನನ್ನು ಉತ್ತರ ಪ್ರದೇಶ ಉಗ್ರರ ನಿಗ್ರಹ ದಳ (ಎಟಿಎಸ್) ಮತ್ತು ಮಹಾರಾಷ್ಟ್ರ ಪೆÇಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪುಣೆಯಲ್ಲಿ ಬಂಧಿಸಿದ್ದಾರೆ. ಪಾಕಿಸ್ತಾನ ವ್ಯಕ್ತಿಯೊಬ್ಬನ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ಗಳಿಗೆ ಹಣ ಜಮೆಗೊಳಿಸಿದ ಆರೋಪದ ಮೇಲೆ ಕಳೆದ ಮಾರ್ಚ್ನಲ್ಲಿ ಉತ್ತರ ಪ್ರದೇಶದ ಗೋರಖ್ಪುರ್ನಲ್ಲಿ ಆರು ಜನರನ್ನು ಬಂಧಿಸಲಾಗಿತ್ತು. ಅವರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು 28 ವರ್ಷದ ರಮೇಶ್ ಶಾನನ್ನು ಜಂಟಿ ಪಡೆ ಬಂಧಿಸಿದೆ. ಈತ ಉಗ್ರರಿಗೆ ಹಣ ಪೂರೈಸುವ ಪ್ರಮುಖ ಸೂತ್ರಧಾರ ಎನ್ನಲಾಗಿದೆ. ಈತ ಈವರೆಗೆ 1 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಉಗ್ರರಿಗೆ ಪೂರೈಸಿದ್ದಾರೆ. ಈತನನ್ನು ತೀವ್ರ ತನಿಖೆಗೆ ಒಳಪಡಿಸಿದ ನಂತರ ಮತ್ತಷ್ಟು ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ.