
ಫೀಫಾ ವರ್ಲ್ಡ್ ಕಪ್ 2018 ರ ಜೂ.20 ರಂದು ನಡೆದ ಪೋರ್ಚುಗಲ್-ಮೊರಾಕೊ ನಡುವಿನ ಪಂದ್ಯದಲ್ಲಿ ಪೋರ್ಚುಗಲ್ ತಂಡ 1-0 ಅಂತರದಿಂದ ಮೊರಾಕೊ ತಂಡವನ್ನು ಪರಾಭವಗೊಳಿಸಿದೆ.
ಗ್ರೂಪ್ ಬಿ ಪಂದ್ಯದಲ್ಲಿ ಮೊರಾಕೊ ತಂಡ ದ್ವಿತಿಯಾರ್ಧದಲ್ಲಿ ಮೊರಾಕೊ ತಂಡ ಉತ್ತಮ ಪ್ರದರ್ಶನ ನೀಡಿತ್ತಾದರೂ, ಪೋರ್ಚುಗಲ್ ತಂಡವನ್ನು ಮಣಿಸಲು ಕ್ರಿಸ್ಟಿಯಾನೊ ರೊನಾಲ್ಡೊ ಅಡ್ಡಿಯಾದರು. ಪೋರ್ಚುಗಲ್ ತಂಡದ ವಿರುದ್ಧ ಗೆಲ್ಲಲು ವಿಫಲವಾದ ಮೊರಾಕೊ ತಂಡ ನಾಕ್ ಔಟ್ ರೌಂಡ್ ನಿಂದ ಹೊರಬಿದ್ದಿದೆ.
ಈ ಪಂದ್ಯದ ಗೆಲುವಿನ ಮೂಲಕ ಮೂರು ಅಂಕಗಳನ್ನು ಪಡೆದಿರುವ ಪೋರ್ಚುಗಲ್ ತಂಡ ಮುಂದಿನ ವಾರ ಇರಾನ್ ವಿರುದ್ಧ ಸೆಣೆಸಲಿದೆ.