ಅಕ್ಲೆಂಡ್, ಜೂ.21-ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂಡಾ ಅಡ್ರೆನ್ ಇಂದು ಆಕ್ಲೆಂಡ್ ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ ಎರಡನೇ ವಿಶ್ವ ನಾಯಕಿ ಎನಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಉನ್ನತ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ನಾನು ಮಗುವಿಗೆ ಜನ್ಮ ನೀಡಿದ ಸಂತಸ ಮತ್ತು ಭಾವೋದ್ವೇಗದಲ್ಲಿದ್ದೇನೆ. ನನ್ನ ಆರೋಗ್ಯ ಮತ್ತು ಸುರಕ್ಷಿತ ಹೆರಿಗೆಗಾಗಿ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು 37 ವರ್ಷದ ಜಸಿಂಡಾ ಅಡ್ರೆನ್ ಹೇಳಿಕೆ ನೀಡಿದ್ದಾರೆ.