ಬೆಳಗಾವಿ,ಜೂ.21- ಖಾನಾಪುರದ ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ಎಸ್ಐಟಿ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೂ ಮುನ್ನ ಆರೋಪಿಗಳು ಖಾನಾಪುರ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಬಂದೂಕು ತರಬೇತಿ ಪಡೆದಿದ್ದರು ಎಂಬ ಶಂಕೆ ಹಿನ್ನೆಲೆಯಲ್ಲಿ ಎಸ್ಐಟಿ ತಂಡ ಅಲ್ಲಿಗೆ ಭೇಟಿ ನೀಡಿದೆ. ಸ್ಥಳೀಯವಾಗಿ ಪರಶುರಾಮ ವಾಗ್ಮೋರೆಗೆ ಬೆಂಬಲ ನೀಡಿರುವವರ ಬಗ್ಗೆಯೂ ತಂಡ ಮಾಹಿತಿ ಕಲೆ ಹಾಕುತ್ತಿದೆ. ಈಗಾಗಲೇ ತಂಡ ಖಾನಾಪುರದಲ್ಲಿ ಬೀಡುಬಿಟ್ಟಿದ್ದು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ. ಆರೋಪಿಯನ್ನು ತಂಡ ತರಬೇತಿ ಪಡೆದ ಸ್ಥಳಕ್ಕೆ ಕರೆದೊಯ್ದಿದೆ. ಬಂದೂಕು ತರಬೇತಿ ಪಡೆದ ಬಗ್ಗೆ ಆರೋಪಿ ಬಾಯಿ ಬಿಟ್ಟ ಕಾರಣ ತಂಡ ಆ ತರಬೇತಿ ಸ್ಥಳ ಪರಿಶೀಲನೆ ನಡೆಸುತ್ತಿದೆ. ಸ್ಥಳೀಯ ಪೆÇಲೀಸರಿಗೆ ಯಾವುದೇ ಮಾಹಿತಿ ನೀಡದೆ ರಹಸ್ಯ ಸ್ಥಳದಲ್ಲಿ ಆರೋಪಿಯ ವಿಚಾರಣೆ ನಡೆಸುತ್ತಿದೆ.