ನವದೆಹಲಿ:ಜೂ-21: ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವದ ವಿವಿಧ ಭಾಗಗಳಲ್ಲಿ ಯೋಗಸನಗಳನ್ನು ಮಾಡುವ ಮೂಲಕ ಗಮನಸೆಳೆಯಲಾಯಿತು. ಭಾರತ, ಅಮೆರಿಕ, ಕೆನಡಾ, ದುಬೈ ಸೇರಿದಂತೆ ವಿಶ್ವದ 150 ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಡೆಹ್ರಾಡೂನ್ನ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಫ್ಆರ್ಐ) ನಲ್ಲಿನ ಮೈದಾನದಲ್ಲಿ 50,000 ಮಂದಿ ಪ್ರಬಲ ಉತ್ಸಾಹಿಗಳ ನೇತೃತ್ವದಲ್ಲಿ ಯೋಗಾಸನಗಳನ್ನು ಮಾಡುವ ಮೂಲಕ ಪ್ರೋತ್ಸಾಹ ನೀಡಿದರು.
ನೇಪಾಳದ ಜಾನಕಿ ಮಂದಿರದಲ್ಲಿ ಸಿಜಿಐ ಬಿರ್ಗುಂಜಿ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಯೋಗದಿನಾಚರಣೆ ಆಚರಿಸಲಾಯಿತು. ರಾಜ್ಯಪಾಲ ರತ್ನೇಶ್ವರ್ ಲಾಲ್ ಕಾಯಸ್ಥ ಮತ್ತು ಮುಖ್ಯಮಂತ್ರಿ ಲಾಲ್ಬಾಬು ರಾವ್ತ್ ಈ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜನಸಾಮಾನ್ಯರಿಗೆ ಯೋಗಾಸನದ ಮಹತ್ವಗಳನ್ನು ತಿಳಿಸಿದರು.
ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬಾಂಗ್ಲಾದೇಶದಲ್ಲಿಯೂ ಕೂಡ ಯೋಗಾಸನಗಳನ್ನು ಮಾಡುವಲ್ಲಿ ಜನತೆ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು. ವಿವಿಧ ಮೈದಾನಗಳಲ್ಲಿ ಸಾವಿರಾರು ಜನರು ಮುಂಜಾನೆಯೇ ಯೋಗಾಭ್ಯಾಸದಲ್ಲಿ ನಿರತರಾಗಿದ್ದರು.
ದಕ್ಷಿಣ ಕೊರಿಯಾದಲ್ಲಿಯೂ ಅಂತರಾಷ್ಟ್ರೀಯ ಯೋಗದಿನವನ್ನು ಸಂಭ್ರಮದಲ್ಲಿ ಆಚರಿಸಲಾಯಿತು. ಸಿಯೋಲ್ ನ ಅಂಬ್ ಎನ್ನಾ ಪಾರ್ಕ್ ನಲ್ಲಿ ನಲ್ಲಿ ನಡೆದ ಯೋಗಾ ಕಾರ್ಯಕ್ರಮದಲ್ಲಿ ಡೆಪ್ಯುಟಿ ಮಿನಿಸ್ಟರ್ ಅಹ್ನ್ ಪಾಲ್ಗೊಂಡಿದ್ದರು.
ಬಹ್ರೇನ್ ನಲ್ಲಿ ಕೂಡ ಭಾರತ ರಾಯಭಾರಿಗಳ ಸಹಯೋಗದಲ್ಲಿ ಅಂತರಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಇಲ್ಲಿನ ಶ್ರೀಕೃಷ್ಣಾ ಮಂದಿರದ ಎದುರು ಯೋಗಾಸನಗಳನ್ನು ಪ್ರದರ್ಶಿಸಲಾಯಿತು.
ರಷ್ಯಾದ ಸೆಂಟ್ ಪೀಟರ್ಸ್ಬರ್ಗ್ ನಲ್ಲಿ ನಾಲ್ಕನೇ ಅಂತರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಾಷಿಂಗ್ಟನ್ ಡಿಸಿಯಲ್ಲಿ ವಿವಿಧ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಕಛೇರಿಗಳ ಹೊರಭಾಗದಲ್ಲಿನ ಉದ್ಯಾನಗಳಿಗೆ ತೆರಳಿ ಯೋಗಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿವಿದ ಆಸನಗಳನ್ನು ಪ್ರದರ್ಶಿಸಿದರು.
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕೂಡ ವಿವಿಧ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಮಾಡಿದರು.
4th inernational yoga day,across the world