ಟ್ರ್ಯಾಕ್ಟರ್‌ ಟ್ರಾಲಿ-ಜೀಪಿಗೆ ಢಿಕ್ಕಿ: 12 ಮಂದಿ ಸ್ಥಳದಲ್ಲೇ ಸಾವು

ಮೊರೆನಾ:ಜೂ-21: ಟ್ರ್ಯಾಕ್ಟರ್‌ ಟ್ರಾಲಿಯೊಂದು ಜೀಪಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 12 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ.

ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಜೀಪಿನಲ್ಲಿದ್ದವರು ಈಚೆಗೆ ಅಗಲಿದ ತಮ್ಮ ಕುಟುಂಬದ ಸದಸ್ಯರೋರ್ವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು

ಜೀಪಿನಲ್ಲಿ ಒಂದೇ ಕುಟುಂಬದ ಸುಮಾರು ಇಪ್ಪತ್ತು ಮಂದಿ ಪ್ರಯಾಣಿಸುತ್ತಿದ್ದರು. ಹಾಗಾಗಿ ಅದು ಓವರ್‌ಲೋಡ್‌ ಆಗಿತ್ತು. ಈ ಜೀಪಿಗೆ ಬೆಳಗ್ಗೆ 6 ಗಂಟೆಯ ಸುಮಾರಿಗೆ ಗಂಜ್ರಾಮ್‌ಪುರ ಗ್ರಾಮಕ್ಕೆ ಸಮೀಪ ಕ್ರಾಸ್‌ ರೋಡ್‌ ಒಂದರಲ್ಲಿ ಉಸುಕು ತುಂಬಿದ ಟ್ರ್ಯಾಕ್ಟರ್‌ ಟ್ರಾಲಿ ಢಿಕ್ಕಿ ಹೊಡೆದಿದೆ ಎಂದು ಮೊರೆನಾ ಎಸ್‌ಪಿ ಅಮಿತ್‌ ಸಾಂಗಿ ಹೇಳಿದರು.

ರಾಷ್ಟ್ರೀಯ ಚಂಬಲ್‌ ಸ್ಯಾಂಕ್‌ಚುವರಿಯಿಂದ ಅಕ್ರಮವಾಗಿ ಉಸುಕು ತುಂಬಿಕೊಂಡು ಟ್ರ್ಯಾಕ್ಟರ್‌ ಟ್ರಾಲಿ ಸಾಗುತ್ತಿತ್ತು. ಅಪಘಾತದ ಭೀಕರತೆಗೆ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ರಾಲಿ ಚಾಲಕ ಅಪಘಾತ ನಡೆದೊಡನೆಯೇ ಪರಾರಿಯಾಗಿದ್ದಾನೆ.

ಮೃತಪಟ್ಟವರೆಲ್ಲರೂ ಗ್ವಾಲಿಯರ್‌ ಜಿಲ್ಲೆಯವರಾಗಿದ್ದಾರೆ. ಅವರು ಗುರ್ಗಾನ್‌ ಗ್ರಾಮಕ್ಕೆ ಹೋಗುತ್ತಿದ್ದರು.

12 killed as tractor-trolley hits jeep in Morena

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ