ಗಿನ್ನಿಸ್‌ ರೆಕಾರ್ಡ್‌ ಪುಟಕ್ಕೆ ಸೇರ್ಪಡೆಯಾದ ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದ ಯೋಗ ಕಾರ್ಯಕ್ರಮ

ಕೋಟಾ:ಜೂ-21: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಸ್ಥಾನದಲ್ಲಿ ಯೋಗ ಗುರು ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಸನಗಳನ್ನು ಪ್ರದರ್ಶಿಸಿದ್ದು, ಗಿನ್ನಿಸ್‌ ರೆಕಾರ್ಡ್‌ ಪುಟಕ್ಕೆ ಸೇರ್ಪಡೆಯಾಗಿದೆ.

ಕಾರ್ಯಕ್ರಮದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಭಾಗಿಯಾಗಿದ್ದರು.

ಕಳೆದ ವರ್ಷ ಪತಂಜಲಿ ಯೋಗ ಪೀಠ ಹಲವು ದಾಖಲೆಗಳನ್ನ ನಿರ್ಮಾಣ ಮಾಡಿತ್ತು. 51 ಗಂಟೆಗಳ ಕಾಲ ಅತೀ ದೊಡ್ಡ ಯೋಗ ಮ್ಯಾರಥಾನ್‌,ಉದ್ದನೆಯ ಶಿರ್ಶಾಸನ ವನ್ನು ಮಾಡಿರುವುದು ದಾಖಲೆ ಪುಟದಲ್ಲಿ ಸೇರಿತ್ತು.

ಕೋಟಾದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 1 ಲಕ್ಷ 5ಸಾವಿರ ಸಂಖ್ಯೆಯ ಉತ್ಸಾಹಿಗಳನ್ನು ಲೆಕ್ಕಹಾಕಲಾಗಿದ್ದು,ಇನ್ನೂ ಹೆಚ್ಚಿನ ಜನರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಸನಗಳನ್ನು ಮಾಡಿದ್ದಾರೆ.

ಈ ಬೃಹತ್​ ಕಾರ್ಯಕ್ರಮಕ್ಕೆ ಎರಡು ದಿನಗಳ ಹಿಂದೆಯೇ ಕೋಟಾಕ್ಕೆ ಬಂದಿದ್ದ ರಾಮ್​ದೇವ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ತರಬೇತಿ ನೀಡಿದ್ದರು.ವಿಶ್ವ ದಾಖಲೆಗಳ ತಂಡ ಕಾರ್ಯಕ್ರಮವನ್ನು ಪರಿಶೀಲನೆ ನಡೆಸಿದೆ. ಒಂದೇ ಜಾಗದಲ್ಲಿ ಅತಿ ಹೆಚ್ಚು ಜನರನ್ನು ಸೇರಿಸಿ ಯೋಗ ಮಾಡಿ ವಿಶ್ವ ದಾಖಲೆ ಮಾಡಲಾಗಿದೆ. ಸುಮಾರು ಎರಡು ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ.

baba ramdev leads-1-05-lakh-yoga-enthusiasts-to-create-new-guinness-world-record

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ