ವಿಶ್ವ ಯೋಗ ದಿನಾಚರಣೆ – ವಿವಿಧೆಡೆ ಯೋಗ ಪ್ರದರ್ಶನ

 

ಬೆಂಗಳೂರು,ಜೂ.20- ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಾಳೆ ನಗರದ ವಿವಿಧೆಡೆ ಯೋಗ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವಚೇತನ ಯೋಗ ಶಾಲೆ:
ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಬೆಳಗ್ಗೆ 6ರಿಂದ 8 ಗಂಟೆವರೆಗೆ ಆಯುಷ್, ಯೋಗ ಗಂಗೋತ್ರಿ, ವಿಶ್ವ ಚೇತನ ಯೋಗ ಶಾಲೆ ಮತ್ತಿತರ ಸಂಸ್ಥೆಗಳು ಯೋಗಾಸನ ಕಾರ್ಯಕ್ರಮ ಹಮ್ಮಿಕೊಂಡಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಶ್ವಾಸ ಗುರು ವಚನಾನಂದ , ಪ್ರಕಾಶ್ ಗುರೂಜಿ, ರಾಜಸ್ವಾಮಿ ಅಣ್ಣ , ಆರಾಧ್ಯ ಗುರೂಜಿ ಮತ್ತಿತರರೊಂದಿಗೆ ಯೋಗ ಪಟುಗಳು ಯೋಗಾಸನ ಯೋಗನೃತ್ಯ, ಹಠಯೋಗ ಮತ್ತಿತರ ಪ್ರದರ್ಶನಗಳನ್ನು ನೀಡಲಿದ್ದಾರೆ.
ಇದೇ ತುಕಡಿ ಇದೇ ಸಮಯದಲ್ಲಿ ವಿಜಯನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಯೋಗ ಪ್ರದರ್ಶನ ಹಮ್ಮಿಕೊಂಡಿದ್ದಾರೆ.
ಇದರಲ್ಲಿ ಶಾಸಕ ಸೋಮಣ್ಣ , ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ , ವಿಶ್ವಚೇತನ ಯೋಗ ಶಾಲೆ, ಬ್ರಹ್ಮಕುಮಾರೀಸ್, ಸುಯೋಗ ಮಹಿಳಾ ಕೇಂದ್ರದವರು ಹಾಗೂ ಶಾಲಾಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ:
ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿವಿ ವತಿಯಿಂದ ನಾಳೆ ಬೆಳಗ್ಗೆ 6.30ರಿಂದ 8.30ರವರೆಗೆ ಆರ್‍ಟಿನಗರದ ಎಚ್‍ಎಂಟಿ ಮೈದಾನದಲ್ಲಿ ಉತ್ತಮ ಆರೋಗ್ಯಕ್ಕಾಗಿ ರಾಜಯೋಗ ಮೆಡಿಟೇಷನ್ ಹಮ್ಮಿಕೊಳ್ಳಲಾಗಿದೆ.
4ನೇ ಅಂತಾರಾಷ್ಟ್ರೀಯ ಯೋಗ ದಿನ: ಆರ್ಟ್ ಆಫ್ ಲೀವಿಂಗ್ ಕೇಂದ್ರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ, ನೆಹರು ಯುವ ಕೇಂದ್ರ ಎನ್‍ಎಸ್‍ಎಸ್, ಎನ್‍ಸಿಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 7 ಗಂಟೆಗೆ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಸಂಸದ ಪಿ.ಸಿ.ಮೋಹನ್ ಭಾಗವಹಿಸುವರು.
ಯೋಗ ಡ್ಯಾನ್ಸ್ ಡೇ: ನಾಟ್ಯ ಸರಸ್ವತಿ ಮತ್ತು ಗ್ರೀನ್ ಪಾತ್ ನೇತೃತ್ವದಲ್ಲಿ ನಾಳೆ ಸಂಜೆ 5 ಗಂಟೆಗೆ ಸಂಪಿಗೆ ರಸ್ತೆ, ರಾಜೀವ್‍ಗಾಂಧಿ ವೃತ್ತ, ಮೆಟ್ರೋ ಸ್ಟೇಷನ್ ಎದುರು, ನಂ.185/1, ಗ್ರೀನ್ ಪಾತ್ ಆರ್ಗಾನಿಕ್ ಸ್ಟೇಟ್‍ನಲ್ಲಿ ಯೋಗ ಡ್ಯಾನ್ಸ್‍ಡೇ ಏರ್ಪಡಿಸಲಾಗಿದೆ ಇದೇ ವೇಳೆ ವಿಚಾರ ಸಂಕಿರಣ ಕೂಡ ಹಮ್ಮಿಕೊಳ್ಳಲಾಗಿದೆ.
ಪಿಇಎಸ್ ವಿಶ್ವವಿದ್ಯಾನಿಲಯ: ಪಿಇಎಸ್ ವಿಶ್ವವಿದ್ಯಾನಿಲಯ ಆವರಣದಲ್ಲಿ ನಾಳೆ ಬೆಳಗ್ಗೆ 7 ಗಂಟೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿದೆ. ಕುಲಪತಿ ಡಾ.ಎಂ.ಆರ್.ದೊರೆಸ್ವಾಮಿ ಅಧ್ಯಕ್ಷತೆ ವಹಿಸುವರು.
ಕೇಂದ್ರ ಸಚಿವ ಅನಂತ್‍ಕುಮಾರ್, ಭಾರತ ಹಾಕಿ ತಂಡದ ಮಾಜಿ ಗೋಲ್‍ಕೀಪರ್, ಏಕಲವ್ಯ ಪ್ರಶಸ್ತಿ ಪುರಸ್ಕøತ ಆಶಿಶ್‍ಬಲ್ಲಾಳ್,ಬೆಂಗಳೂರು ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞೆ ಡಾ.ವಿಜಯಲಕ್ಷ್ಮಿ, ಪಿಇಎಸ್ ವಿವಿಯ ಪೆÇ್ರ.ಡಾ.ಜವಾಹರ್ ಭಾಗವಹಿಸುವರು.
ಸರಳ ಯೋಗ ವೇದಿಕೆ: ಮಲ್ಲೇಶ್ವರಂ ಸ್ಯಾಂಕಿ ಪಾರ್ಕ್‍ನಲ್ಲಿರುವ ಯೋಗ ಮಂದಿರದಲ್ಲಿ ಸರಳ ಯೋಗ ವೇದಿಕೆ ವತಿಯಿಂದ ನಾಳೆ ಬೆಳಗ್ಗೆ 6.15ಕ್ಕೆ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಸಂಜೆ 4 ರಿಂದ 6 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಾಸಕ ಡಾ.ಅಶ್ವತ್ಥನಾರಾಯಣ, ಬಿಬಿಎಂಪಿ ಸದಸ್ಯೆ ಸುಮಂಗಲಾ ಕೇಶವಮೂರ್ತಿ, ಯೋಗ ಚಾಂಪಿಯನ್ ಡಾ.ವಿಶ್ವಬಂಧು ನಾಗೇಶ್, ಡಾ.ಮೇಲುಕೋಟೆ ಶ್ರೀಧರ್, ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಎಸ್. ಸುಲಧಾಳ ಭಾಗವಹಿಸುವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ