
ಹುಬ್ಬಳ್ಳಿ- ಟ್ರಾಫಿಕ್ ಜಾಮ್ ನಲ್ಲಿ ಅಂಬ್ಯುಲೆನ್ಸ್ ವಾಹನ ಸಿಲುಕಿಕೊಂಡ ಪರಿಣಾಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೋಗಿ ಪರದಾಡುವಂತಾಯಿತು. ವಿಷ ಸೇವಿಸಿದ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬ್ಯುಲೆನ್ಸ್ ವಾಹನ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿತ್ತು. ಅರ್ಧ ಗಂಟೆಗೂ ಹೆಚ್ಚಕಾಲ ಟ್ರಾಫಿಕ್ ನಲ್ಲಿ ಸಿಲುಕಿದ ಅಂಬುಲನ್ಸ್ ವಾಹನವನ್ನು ಸ್ಥಳೀಯರ ಸಹಾಯದಿಂದ ಕಿಮ್ಸ್ ಗೆ ರವಾನಿಸಲಾತಿತು. ಸ್ಥಳೀಯರು ಟ್ರಾಫಿಕ್ ಸಡಿಲ ಗೊಳಿಸಿ ಅಂಬುಲನ್ಸ್ ಗೆದಾರಿ ಮಾಡಿಕೊಟ್ಟರು. ಹುಬ್ಬಳ್ಳಿಯಲ್ಲಿ ದಿನೇ ದಿನೇ ವಾಹನ ದಟ್ಟನೆ ಹೆಚ್ಚಾಗುತ್ತಿದ್ದಯ, ಇಂಥ ಘಟನೆಗಳು ಹೆಚ್ವುತ್ತಿವೆ. ವಾಹನ ದಟ್ಟನೆ ಬಗ್ಗೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರದ ಜನರು ಆಗ್ರಹಿಸುತ್ತಿದ್ದಾರೆ.