ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಬಂಧನ

ಹುಬ್ಬಳ್ಳಿ, ಜೂ 20 – ಜೂಜು, ಹೆಣ್ಣಿನ ಖಯಾಲಿ, ಐಷಾರಾಮಿ ಜೀವನಕ್ಕೆ ಮಾರುಹೋಗಿ ಕುಖ್ಯಾತ ಸರಗಳ್ಳನಾದ ವಿಶ್ವನಾಥ ಕೋಳಿವಾಡ ಅಲಿಯಾಸ್ ಅಚ್ಯುತ್ ಕುಮಾರ್ ಗಣಿಗ(31) ಈಗ ಪೆÇಲೀಸರ ಅತಿಥಿ. ಸರಗಳ್ಳರು ಜೋಡಿಯಾಗಿ ಅಥವಾ ಗುಂಪು ಗುಂಪಾಗಿ ಸರಗಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ.ಆದರೆ ಇಲ್ಲೊಬ್ಬ ಖತರ್ ನಾಕ್ ಸರಗಳ್ಳ ಒಂಟಿಯಾಗಿ ನೂರ ಹತ್ತಕ್ಕೂ ಹೆಚ್ಚು ಸರಗಳ್ಳತನ ಮಾಡಿ ಈಗ ಪೆÇಲೀಸರ ಅತಿಥಿಯಾಗಿದ್ದಾನೆ. ಈತ ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದವನು. ಈ ಹಿಂದೆ ಈತನನ್ನು ಹುಬ್ಬಳ್ಳಿಯ ಅಶೋಕ ನಗರ ಪೆÇಲೀಸರು ಹೆಡಮುರಿ ಕಟ್ಟಲು ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಸಹ ಕಂಡಿದ್ದರು.
ಕಳೆದ 15 ವರ್ಷಗಳಿಂದ ಆರೋಪಿ ಸರಗಳ್ಳತನ ಮಾಡುತ್ತಿದ್ದಾನೆ. ಒಂಟಿ ಮಹಿಳೆಯರು, ವೃದ್ಧೆಯರು ಹಾಗೂ ಮನೆ ಮುಂದೆ ಒಂಟಿಯಾಗಿ ತಿರುಗಾಡುವ ಶ್ರೀಮಂತ ಮಹಿಳೆಯರೇ ಇವನ ಟಾರ್ಗೇಟ್.
ಹುಬ್ಬಳ್ಳಿ ಧಾರವಾಡ, ಗದಗ, ಬೆಳಗಾವಿ, ಬಳ್ಳಾರಿ ಮತ್ತು ಬೆಂಗಳೂರು ಮಹಾನಗರಗಳಲ್ಲಿ 110ಕ್ಕೂ ಸರಗಳ್ಳತನ ಮಾಡಿದ್ದ ಈತ ಸರಗಳ್ಳತನದಲ್ಲಿ ಶತಕ ಬಾರಿಸಿ ಈಗ ಮತೊಮ್ಮೆ ಭಾನುವಾರ ರಾತ್ರಿ ಪೆÇಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಸೋಮವಾರ ಮುಂಜಾನೆ ಮೂತ್ರ ವಿಸರ್ಜನೆ ನೆಪ ಮಾಡಿ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಕುಖ್ಯಾತ ಸರಗಳ್ಳ ವಿಶ್ವನಾಥ ಕೋಳಿವಾಡ ಅಲಿಯಾಸ್ ಅಚ್ಯುತ್ ಕುಮಾರ್‍ನನ್ನು ಜಂಟಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪಶ್ಚಿಮ ವಿಭಾಗದ ಪೆÇಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ರಾಜ್ಯದ ವಿವಿದೆಢೆ ಆರೋಪಿ ನಡೆಸಿರುವ 110ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳ ಮಾಹಿತಿಯನ್ನು ಪಶ್ಚಿಮ ವಿಭಾಗದ ಪೆÇಲೀಸರು ಪಡೆದುಕೊಳ್ಳುತ್ತಿದ್ದು ಹುಬ್ಬಳ್ಳಿ ಧಾರವಾಡ ಪೆÇಲೀಸ್ ಕಮೀಷನರ್ , ಬಳ್ಳಾರಿ, ಗದಗ ಎಸ್‍ಪಿ ಅವರುಗಳನ್ನು ಸಂಪರ್ಕಿಸಿದ್ದಾರೆ.
ಕುಖ್ಯಾತ ಸರಗಳ್ಳ ವಿಶ್ವನಾಥ ಅಲಿಯಾಸ್ ಅಚ್ಯುತುಕುಮಾರ ಮಿತಿ ಮೀರಿದ ಹೆಣ್ಣಿನ ಖಯಾಲಿ, ಮೋಜಿನ ಜೀವನ ನಡೆಸಲು ಪಲ್ಸರ್ ಬೈಕ್‍ನಲ್ಲಿ ಸಂಚರಿಸುತ್ತಾ ಚಾಕು ಇನ್ನಿತರ ಮಾರಕಾಸ್ತ್ರಗಳೊಂದಿಗೆ ಒಂಟಿ ಮಹಿಳೆಯರ ಚಿನ್ನದ ಸರ ಕಸಿಯುತ್ತಿದ್ದ . ಪ್ರತಿರೋಧ ತೋರಿದವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ. ಈತನ ಬಂಧನಕ್ಕೆ ಹುಬ್ಬಳ್ಳಿ-ಧಾರವಾಡ ಪೆÇಲೀಸರು ಸಹ ಬಲೆ ಬೀಸಿದ್ದರು.
ಮೊದಲು ಹೆಡಮುರಿ ಕಟ್ಟಿದ್ದು
ಹುಬ್ಬಳ್ಳಿಯ ಅಶೋಕ ನಗರ ಪೆÇಲೀಸರು;
ಕುಖ್ಯಾತ ಸರಗಳ್ಳ ವಿಶ್ವನಾಥ ಕೋಳಿವಾಡ ಅಲಿಯಾಸ್ ಅಚ್ಯುತ್ ಕುಮಾರ ಗಣಿಗ (31) ಅಶೋಕ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿ ಪೆÇಲೀಸರಿಗೆ ತೆಲೆನೋವಾಗಿದ್ದ ಈತನನ್ನು ಹೆಡಿಮುರಿಕಟ್ಟಲು ಅಶೋಕ ನಗರ ಪೆÇೀಲಿಸ್ ಠಾಣೆಯ ಸಿಪಿಐ ಜಗದೀಶ ಹಂಚಿನಾಳ ಶ್ರಮ ಪಟ್ಟಿದ್ದರು.
ಗದಗದಲ್ಲಿ ತನ್ನ ಎರಡನೇ ಪ್ರೆಯಸಿಯ ಜೊತೆ ಇದ್ದಾನೆ ಎಂಬ ಮಾಹಿತಿ ಪಡೆದ ಜಗದೀಶ್ ಹಂಚಿನಾಳ ಅವರು ಎರಡು ದಿನಗಳ ಕಾಲ ಅವನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಪೆÇಲೀಸರು ನನ್ನ ಬೆನ್ನು ಬಿದ್ದಿದ್ದಾರೆ ಎಂಬ ವಾಸನೆ ಬಡಿಯುತ್ತಿದ್ದಂತೆ ಬಸ್ ನಿಲ್ದಾಣದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಸಿಪಿಐ ಜಗದೀಶ್ ಹಂಚಿನಾಳ ಅವರು ಜೀವನದ ಹಂಗು ತೊರೆದು ಬೆನ್ನು ಹತ್ತಿದ್ದಾರೆ. ಆತ ಓಡಿಹೋಗುತಿದ್ದಂತೆ ಜಗದೀಶ್ ಹಂಚಿನಾಳ ಅವರು ಪೈರಿಂಗ್ ಮಾಡಿದ್ದಾರೆ. ಆದರೂ ಖತರ್‍ನಾಕ್ ಸರಗಳ್ಳ ತಪ್ಪಿಸಿಕೊಂಡ.
ನಂತರ ಕೆಲವೇ ದಿನಗಳಲ್ಲಿ ಮತ್ತೆ ಈತ ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷವೇ ಕಾರ್ಯಪ್ರವೃತ್ತರಾದ ಹುಬ್ಬಳ್ಳಿಯ ಪೆÇಲೀಸರು ರೈಲ್ವೆ ನಿಲ್ದಾಣ ಬಳಿ ಬೆನ್ನು ಹತ್ತಿ ಬಂಧಿಸಿದರು.
ಜೈಲಿಗೆ ಹೋಗಿ ಬರುವುದು ಮಾವನ ಮನೆಗೆ ಹೋಗಿ ಬಂದತ್ತೆ; ವಿಶ್ವನಾಥ ಕೋಳಿವಾಡ ಸರಗಳ್ಳತನ ಮಾಡಿ ಪೆÇಲೀಸರ ಕೈಗೆ ಸಿಕ್ಕಿಹಾಕಿಕೊಂಡು ಶಿಕ್ಷೆಗೆ ಒಳಗಾಗಿ ಮತ್ತೆ ಹೊರಗಡೆ ಬರುವುದು ಸಲೀಸಾಗಿದೆ. ಈತ ಕಳ್ಳತನ ಮಾಡಿದ ಚಿನ್ನಾಭರಣ ಮಾರಾಟ ಮಾಡಿ ಅಪಾರ ಹಣ ಗಳಿಸುತ್ತಿದ್ದು, ಈತನಿಗೆ ಸಹಾಯಕ್ಕೆ ಕೆಲವರು ಸಹ ಇದ್ದಾರೆ. ಇದೇ ಭರವಸೆ ಮೇಲೆ ಸರಗಳ್ಳತನದಲ್ಲಿ ಎತ್ತಿದ ಕೈ. ಯಾವುದೇ ಕಾನೂನು ಭಯ ಇತನಿಗೆ ಇಲ್ಲ.
ಹುಬ್ಬಳ್ಳಿ ಪೆÇಲೀಸರು ಈತನನ್ನು ಹಿಂದೆ ಬಂಧನ ಮಾಡಿ ಯಶಸ್ವಿಯಾದ ನಂತರ ಆರೋಪಿ ವಿಶ್ವನಾಥನಿಂದ ಕದ್ದ ಬಂಗಾರ ಖರೀದಿಸುತ್ತಿದ್ದ ನಗರದ ವ್ಯಾಪಾರಸ್ಥರಾದ ವೆಂಕಟೇಶ ನಾರಾಯಣಸಾ ಕಬಾಡೆ, ಹನುಮಂತಸಾ ವಿಠಲಸಾ ಮೆಹರವಾಡೆ ಎಂಬುವವರನ್ನು ಕೂಡ ಬಂಧಿಸಿದ್ದರು. ಖತರ್ನಾಕ್ ಸರಗಳ್ಳತನ ಮಾಡುತ್ತಿದ್ದ ವಿಶ್ವನಾಥ ಕೇವಲ ಸಂಜೆಯ ಹೊತ್ತಷ್ಟೇ ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಸರಗಳ್ಳತನ ಮಾಡುತ್ತಿದ್ದ. ಜಾಣತನದಿಂದ ಸಿಸಿ ಟಿವಿ ಕ್ಯಾಮೆರಾ ಇರದ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದ.
ಪೆÇಲೀಸರಿಗೆ ಭಾರೀ ತಲೆನೋವಾಗಿದ್ದ ಸರಗಳ್ಳತನ ತಡೆಯಲು ಹುಬ್ಬಳ್ಳಿ ಪೆÇಲೀಸರು ತಂಡವನ್ನು ರಚಿಸಿ ಆತನನ್ನು ಹಿಡಿಯಲು ಹೊಂಚು ಹಾಕಿದ್ದರು. ಈ ಹಿಂದೆ ಸರಗಳ್ಳತನ ಮಾಡುತ್ತಿದ್ದ ರೀತಿಯಲ್ಲಿ ಇತ್ತೀಚಿನ ಸರಗಳ್ಳತನ ಪ್ರಕರಣಗಳು ಹೊಂದಾಣಿಕೆಯಾಗುತ್ತಿದ್ದವು. ಇದರಿಂದ ಸಂಶಯಗೊಂಡ ಪೆÇಲೀಸರು ವಿಶ್ವನಾಥನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ನಂತರ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧನ ಮಾಡಿದ್ದರು. ನಂತರ ಕೆಲವೇ ದಿನಗಳಲ್ಲಿ ಮತ್ತೆ ಈತ ಜಾಮೀನನ ಮೇಲೆ ಹೊರಗಡೆ ಬಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಒಂಟಿ ಮಹಿಳೆಯ 90 ಗ್ರಾಂ ಚಿನ್ನ ಸರಳ್ಳತನ ಮಾಡಿ ಮತ್ತೆ ಜೈಲು ಸೇರಿದ.
ಇದಾದ ನಂತರ ಮತ್ತೆ ಜೈಲಿನಿಂದ ಹೊರಗಡೆ ಬಂದು ಎರಡನೇ ಪ್ರೆಯಿಸಿ ಜೊತೆ ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿ ವಿಶ್ವನಾಥ ಕೋಳಿವಾಡ ಅಲಿಯಾಸ್ ಅಚ್ಯುತ್ ಕುಮಾರ್ ಅಲ್ಲಿಯೇ ತನ್ನ ಕರಾಮತ್ ನಡೆಸಿ ಈಗ ಪೆÇಲೀಸರ ಅತಿಥಿಯಾಗಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ