ಕೋಲಾರ- ನ್ಯಾಯಾದೀಶರ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಕೋಲಾರ ತಾಲೂಕು ಬೆಟ್ಟಬೆಣಜೇನಹಳ್ಳಿ ಗ್ರಾಮದ ರಮೇಶ್ ( 30) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನಲೆ, ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು ದಂಪತಿ ವಿಚಾರಣೆ ನಡೆದಿತ್ತು, ಈ ವೇಳೆ ರಮೇಶ್ ಏಕಾಏಕಿ ವಿಷಸೇವಿಸದ್ದಾನೆ. ರಮೇಶ್ ನನ್ನು ಕೂಡಲೇ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.