ಆರೋಗ್ಯದಾಯಕ ಕಬ್ಬಿನ ರಸ; ಅನೇಕ ಸಮಸ್ಯೆಗಳಿಗೆ ಉತ್ತರಗಳು

ಶೇಕಡ ಹದಿನೈದರಷ್ಟು ನೈಸರ್ಗಿಕ ಸಕ್ಕರೆಯಿರುವ ಕಬ್ಬಿನ ರಸ ಅತ್ಯಂತ ಆರೋಗ್ಯಕರ ಪಾನೀಯ. ಬೇಸಗೆಯಲ್ಲಿ ಅದರ ಸೇವನೆ ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ. ತಾಮ್ರ, ಕಬ್ಬಿಣ, ಕೋಬಾಲ್ಟ್, ಸತು, ಕ್ರೋಮಿಯಂ, ಸುಣ್ಣ, ರಂಜಕ, ಪೊಟಾಷಿಯಂ, ಮೆಗ್ನೇಷಿಯಂ, ಪ್ರೊಟೀನ್, ಬಿ ಜೀವಸತ್ವಗಳಿಂದ ಸಮೃದ್ಧವಾಗಿರುವ ಅದರಲ್ಲಿ ಮೂವತ್ತು ವಿಧದ ಪೋಷಕಾಂಶಗಳಿವೆ.

ಯಾರು ಯಾರು ಕಬ್ಬಿನ ರಸ ಕುಡಿಯ ಬೇಕು

  • ಗರ್ಭಧಾರಣೆಯ ಆರಂಭದಿಂದಲೇ ಗರ್ಭಿಣಿಯರು ಕಬ್ಬಿನ ರಸ ಕುಡಿಯಬಹುದು. ಅದು ಪ್ರೊಟೀನ್ ನಷ್ಟವನ್ನು ತಡೆದು ರಕ್ತದಲ್ಲಿ ಕೆಂಪು ಕಣಗಳನ್ನು ವರ್ಧಿಸುತ್ತದೆ. ಅದರೊಡನೆ ಶುಂಠಿ ರಸ ಬೆರೆತರೆ ವಾಕರಿಕೆ, ಉರಿಮೂತ್ರ ನಿಲ್ಲಿಸುತ್ತದೆ. ಶಿಶುವಿಗೂ ಚೇತೋಹಾರಿಯಾಗಿದೆ.
  • ಕಬ್ಬಿನ ರಸದಲ್ಲಿ ಅಲ್ಫಾ ಹೈಡ್ರಾಲಿಕ್ ಮತ್ತು ಗ್ಲೈಕೊ ಆಮ್ಲಗಳಿವೆ. ನಿತ್ಯ ಅದರ ಸೇವನೆಯಿಂದ ಉಗುರಿನ ಕಲೆಗಳು ಮಾಯವಾಗಿ ಹೊಳಪು ಬರುತ್ತದೆ. ಕಾಂತಿಯುಕ್ತವಾದ ತಲೆಗೂದಲು ಸಮೃದ್ಧಿಯಾಗಲು, ಬಾಲ ನರೆ ತಡೆಯಲು ಇದು ಸಹಾಯಕ.
  • ಮೂತ್ರಕೋಶದ ಬಹುತೇಕ ಸಮಸ್ಯೆಗಳನ್ನು ಕಬ್ಬಿನ ರಸದ ಸೇವನೆಯಿಂದ ನಿವಾರಿಸಬಹುದು. ಮೂತ್ರಪಿಂಡದ ಕಲ್ಲು, ಸೋಂಕು, ಲೈಂಗಿಕ ರೋಗಗಳ ತೀವ್ರತೆ ಮುಂತಾದ ಸಮಸ್ಯೆಗಳನ್ನು ಅದು ತಡೆಯುತ್ತದೆ.
  • ಸ್ತನ ಮತ್ತು ಪ್ರೊಸ್ಟೇಟ್ ಗ್ರಂಥಿಯ ಕ್ಯಾನ್ಸರ್ ರೋಗದ ಜೀವಕೋಶಗಳ ಬೆಳವಣಿಗೆಯನ್ನು ತಡೆದು ನಿಲ್ಲಿಸಲು ಸಮರ್ಥವಾದ ಕಬ್ಬಿನ ರಸ ರಕ್ತದಲ್ಲಿರುವ ಗ್ಲೂಕೋಸಿನ ಮಟ್ಟವನ್ನು ನಿಯಂತ್ರಿಸಬಲ್ಲುದು.
    ಕೊಲೆಸ್ಟೆರಾಲ್ ತಗ್ಗಿಸಿ ದೇಹದ ತೂಕ ಕಳೆದುಕೊಳ್ಳಬೇಕಿದ್ದರೆ ಕೆಲವು ದಿನಗಳ ವರೆಗೆ ಕಬ್ಬಿನ ರಸದೊಂದಿಗೆ ಎಳನೀರು ಮತ್ತು ಲಿಂಬೆರಸ ಬೆರೆಸಿ ಸೇವಿಸಬೇಕು.
  • ಕಬ್ಬಿನ ರಸದಲ್ಲಿರುವ ಪೊಟಾಷಿಯಂ ಹೊಟ್ಟೆಯ ಸೋಂಕು ಮತ್ತು ಮಲಬದ್ಧತೆ ನಿವಾರಿಸುತ್ತದೆ. ಕಾಮಾಲೆ ರೋಗವಿರುವವರಿಗೆ ರಸದ ಸೇವನೆ ಔಷಧಿಯೂ ಹೌದು. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
    ಜ್ವರವಿರುವವರು ಕಬ್ಬಿನ ರಸವನ್ನು ಬಿಸಿ ಮಾಡಿ ಆರಿಸಿ ಕುಡಿಯುವದರಿಂದ ದೇಹದ ಉಷ್ಣತೆ ಇಳಿಯುತ್ತದೆ. ಗಂಟಲುನೋವು, ಶೀತಗಳೂ ಗುಣವಾಗುತ್ತವೆ.
  • ಮೂಳೆಗಳ ಬೆಳವಣಿಗೆಗೆ ಬೇಕಾದಷ್ಟು ಸುಣ್ಣ ಕಬ್ಬಿನ ರಸದಲ್ಲಿದೆ. ದಂತಕ್ಷಯ, ಉಸಿರಿನ ದುರ್ಗಂಧಗಳನ್ನು ದೂರವಿಡುತ್ತದೆ. ಗಾಯಗಳಿದ್ದರೆ ಗುಣವಾಗುವ ವೇಗ ಹೆಚ್ಚಿಸುತ್ತದೆ.
  • ಮುಖದ ಕಲೆ, ಚರ್ಮದ ಸುಕ್ಕು, ಮೊಡವೆಗಳನ್ನು ನಿವಾರಿಸಿ ಚರ್ಮದ ಮೃದುತ್ವ ಹೆಚ್ಚಲು ಕಬ್ಬಿನ ರಸ ಸಹಕಾರಿ. ದೇಹದಿಂದ ವಿಷವನ್ನು ಹೊರಗೆ ಹಾಕುವ ಚಯಾಪಚಯ ಹೆಚ್ಚುತ್ತದೆ.
    ವ್ಯಾಯಾಮ ಮಾಡಿ ಬಂದ ಮೇಲೆ ಕಬ್ಬಿನ ರಸ ಕುಡಿಯುವುದರಿಂದ ಸ್ನಾಯುಗಳಿಗೆ ಕ್ಷಿಪ್ರವಾಗಿ ಬಲ ದೊರಕುತ್ತದೆ.

 

 ಈ ಲೇಖನದ ಬಗ್ಗೆ ಹೆಚ್ಚು ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ