ಮೈಸೂರು, ಜೂ. 20 – ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಂಸ್ಕøತಿಕ ನಗರಿ ಮೈಸೂರು ಸಜ್ಜುಗೊಂಡಿದೆ. ನಾಳೆ ನಡೆಯಲಿರುವ 4ನೇ ಅಂತಾರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ನಗರದ ರೇಸ್‍ಕೋರ್ಸ್ ಮೈದಾನದಲ್ಲಿ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ಯೋಗ ದಿನಾಚರಣೆ ಅಂಗವಾಗಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶಿಸಲಿದ್ದು, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ 5 ಗಂಟೆಯಿಂದಲೇ ಕೆಎಸ್‍ಆರ್‍ಟಿಸಿ ಬಸ್‍ಗಳು ನಿಗದಿತ ಸ್ಥಳಗಳಿಂದ ರೇಸ್‍ಕೋರ್ಸ್ ಮೈದಾನಕ್ಕೆ ತೆರಳಲಿವೆ. ಯೋಗಪಟುಗಳು ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಮೈದಾನಕ್ಕೆ ಪ್ರವೇಶಕ್ಕಾಗಿ 7 ಗೇಟ್‍ಗಳ ವ್ಯವಸ್ಥೆ ಮಾಡಲಾಗಿದೆ. ಗೇಟ್ ನಂ.1 ಕಾರಂಜಿ ಕೆರೆ, ಗೇಟ್‍ನಂ.2 ರೇಸ್‍ಕೋರ್ಸ್ ಮುಖ್ಯದ್ವಾರ, ಗೇಟ್ ನಂ.3-4 ಮಾಲ್ ಆಫ್ ಮೈಸೂರು ಎದುರು, ಗೇಟ್ ನಂ.5 ಲಾರಿಸ್ಟ್ಯಾಂಡ್, ಗೇಟ್ ನಂ.6 ಗಾಲ್ಫ್ ಕೋರ್ಚ್ ಸೆಂಟರ್, ಗೇಟ್ ನಂ.7 ಸಿಎಆರ್ ಗ್ರೌಂಡ್ಸ್ ಎದುರು ತೆರೆಯಲಾಗಿರುತ್ತದೆ.
ಗೇಟ್ ನಂ.7 ರಲ್ಲಿ ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಗೇಟ್ ನಂ. 1 ರಿಂದ 6ರವರೆಗೆ ಸಾರ್ವಜನಿಕರು ಪ್ರವೇಶ ಪಡೆಯಬಹುದು. ಈ ಎಲ್ಲಾ ಗೇಟ್‍ಗಳು ಬೆಳಗ್ಗೆ 5 ಗಂಟೆಯಿಂದಲೇ ತೆರೆಯಲಾಗಿರುತ್ತದೆ. ಬೆಳಗ್ಗೆ 6 ಗಂಟೆಯೊಳಗೆ ಮೈದಾನಕ್ಕೆ ಪ್ರವೇಶ ಪಡೆದಿರಬೇಕು.
ವಾಹನಗಳ ಪಾರ್ಕಿಂಗ್‍ಗಾಗಿ ಪ್ರತ್ಯೇಕ ಸ್ಥಳಗಳನ್ನು ಪೆÇಲೀಸರು ವ್ಯವಸ್ಥೆ ಮಾಡಿದ್ದಾರೆ.
ಮೈದಾನದಲ್ಲಿ 70 ಯೋಗ ಬ್ಲಾಕ್‍ಗಳನ್ನು ವ್ಯವಸ್ಥೇ ಮಾಡಲಾಗಿದೆ. ಒಂದು ಬ್ಲ್ಯಾಕ್‍ನಲ್ಲಿ 300 ಮಂದಿ ಕುಳಿತು ಯೋಗ ಮಾಡಬಹುದಾಗಿದೆ. ಯೋಗಪಟುಗಳಿಗಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರದರ್ಶನದ ನಂತರ ಲಘು ಉಪಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ವೈದ್ಯಕೀಯ ಸಹಾಯ ಕೇಂದ್ರವನ್ನು ತೆರೆಯಲಾಗಿದೆ.